ಕರಾಟೆ ಟೂರ್ನಿಯಲ್ಲಿ ಖುಷಿ ಕಾಮತ್ ಪ್ರಥಮ

khushi
ಖುಷಿ ಕಾಮತ್
Published on

ಕೊಕ್ಕರ್ಣೆ: ಉಪ್ಪೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಬ್ರಹ್ಮಾವರ ವಲಯಮಟ್ಟದ ಕರಾಟೆ ಟೂರ್ನಿ ಕುಮಿಟೆ ವಿಭಾಗದಲ್ಲಿ ಆವರ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಖುಷಿ ಕಾಮತ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತರಬೇತುದಾರ ಅಶೋಕ್ ಕುಲಾಲ್, ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಇವರು ವಂಡಾರು ಮಾವಿನಕಟ್ಟೆ ಸತೀಶ್ಚಂದ್ರ ಕಾಮತ್, ರೇಣುಕಾ ಕಾಮತ್ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net