18 ರಂದು ಸ್ವಯಂ ರಕ್ಷಣೆಗಾಗಿ ಕರಾಟೆ ಕಾರ್ಯಕ್ರಮ

Karate
Published on

ವಿಶ್ವ ಕರಾಟೆ ದಿನದ ಅಂಗವಾಗಿ ಮೈಸೂರು ಕರಾಟೆ ಸಂಸ್ಥೆ ವತಿಯಿಂದ ಜೂ.18ರ ಭಾನುವಾರ ಬೆಳಗ್ಗೆ 8 ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ‘ಸ್ವಯಂ ರಕ್ಷಣೆಗಾಗಿ ಕರಾಟೆ’ ಕಾರ್ಯಕ್ರಮ ಆಯೋಜಿಸಲಾಗಿದೆ.


1500 ಕರಾಟೆಪಟುಗಳನ್ನು ಒಂದೆಡೆ ಸೇರಿಸಿ ಆ ಮೂಲಕ ಕರಾಟೆ ಪ್ರದರ್ಶನ ನಡೆಯಲಿದೆ. ಮೈಸೂರು ಮತ್ತು ವಿವಿಧ ತಾಲೂಕುಗಳಿಂದ ಕರಾಟೆ ಪಟುಗಳು ಆಗಮಿಸಲಿದ್ದಾರೆ. ಮೈಸೂರಿನ ವಿವಿಧ ಕರಾಟೆ ಸಂಸ್ಥೆಗಳು ಭಾಗವಹಿಸಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಸೋಸಲೆ ಸಿದ್ದರಾಜು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕೃಷ್ಣಯ್ಯ ಅಧ್ಯಕ್ಷತೆ ವಹಿಸುವರು. ಸಿ.ಎಸ್.ಅರುಣ್ ಮಾಚಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ದೀಪಕ್ ಕುಮಾರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಕರಾಟೆ ತರಬೇತುದಾರರಾದ ಶಂಕರ್, ಶಿವದಾಸ್, ಮಹದೇವಸ್ವಾಮಿ, ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net