ಕರಾಟೆ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗಿ

mysore vv sports - Copy
Published on

ಮೈಸೂರು: ಛತ್ತೀಸ್‌ಗಡದ ಅಟಲ್ ಬಿಹಾರಿ ವಾಜಪೇಯಿ ವಿಶ್ವವಿದ್ಯಾಲಯದಲ್ಲಿ ಜ.17 ರಿಂದ 22ರವರೆಗೆ ಆಯೋಜಿಸಿರುವ 2022-23ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಮತ್ತು ಪುರುಷರ ಕರಾಟೆ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗಿಯಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿತ್ತು.


ಮಹಿಳಾ ತಂಡ: ಮಹಾರಾಣಿ ಕಾಲೇಜಿನ ಟಿ.ಕೃತಿ (ನಾಯಕಿ), ಶಾರದಾ ವಿಲಾಸ ಕಾಲೇಜಿನ ಆರ್. ಯಶಸ್ವಿನಿ, ಮರಿಮಲ್ಲಪ್ಪ ಕಾಲೇಜಿನ ಎಚ್. ಸುಧಾ, ಆರ್. ದಾಕ್ಷಾಯಣಿ, ಮಹಾರಾಜ ಕಾಲೇಜಿನ ಎಸ್. ಅಶ್ವಿನಿ, ಮಾನಸಗೋತ್ರಿಯ ದಿಯಾ ಎಸ್. ಅರಸ್ ತಂಡದಲ್ಲಿದ್ದಾರೆ.
ಪುರುಷರ ತಂಡ: ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಜಿ. ಶಶಾಂಕ್(ನಾಯಕ), ಮಾನಸಗಂಗೋತ್ರಿಯ ಡಿ.ಎಸ್. ತೇಜಸ್, ಮರಿಮಲ್ಲಪ್ಪ ಕಾಲೇಜಿನ ಡಿ.ಜೆ. ಸೂರ್ಯ, ಶಾರದಾ ವಿಲಾಸ ಕಾಲೇಜಿನ ವಿನೀತ್‌ರಾಜ್, ಸೇಂಟ್ ಜೋಸೆಫ್ ಕಾಲೇಜಿನ ಪ್ರೀತಂ, ಎಸ್. ನಾಗೇಂದ್ರ ತಂಡದಲ್ಲಿದ್ದಾರೆ.

ತರಬೇತುದಾರರಾದ ಎಸ್. ದೀಪಕ್‌ಕುಮಾರ್, ಭಾರತಿ ಕೆ. ಆನಂದ್, ವ್ಯವಸ್ಥಾಪಕ ಎಸ್. ಜಶ್ವಂತ್ ಜತೆ ನಮ್ಮ ತಂಡ ಪಂದ್ಯಾವಳಿಯಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net