ಅಂತಾರಾಷ್ಟ್ರೀಯ ಶಿತೊ-ರು ಚಾಂಪಿಯನ್‌ಶಿಪ್‌ಗೆ ಶುಭಂ ಎಸ್. ಅಂಚನ್ , ಅರ್ಜುನ್ ದಿನೇಶ್ ಆಯ್ಕೆ

mng-14sep-subham s anchan
Published on


ಮಂಗಳೂರು : ಇಂಡೋನೇಶ್ಯದ ಜಕಾರ್ತದಲ್ಲಿ 10ನೆ ಅಂತಾರಾಷ್ಟ್ರೀಯ ಶಿತೊ-ರು ಚಾಂಪಿಯನ್‌ಶಿಪ್ ಸೆ. 20ರಿಂದ 24ರವರೆಗೆ ನಡೆಯಲಿದ್ದು, ದ.ಕ. ಜಿಲ್ಲೆಯ ಇಬ್ಬರು ಕರಾಟೆ ಚಾಂಪಿಯನ್‌ಗಳು ಭಾಗವಹಿಸಲಿದ್ದಾರೆ.
75 ಕೆಜಿ ತೂಕ ಹಾಗೂ 21 ವರ್ಷದ ವಿಭಾಗದಲ್ಲಿ ಶುಭಂ ಎಸ್. ಅಂಚನ್ ಹಾಗೂ 55 ಕೆಜಿ ವಿಭಾಗದ 17 ವರ್ಷದೊಳಗಿನ
ವಿಭಾಗದಲ್ಲಿ ಅರ್ಜುನ್ ದಿನೇಶ್ ಅವರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ದ.ಕ. ಜಿಲ್ಲಾ ಕರಾಟೆ ಅಸೋಸಿಯೇಶನ್‌ನ ಅಧ್ಯಕ್ಷ ಈಶ್ವರ್ ಕಟೀಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಿಂದ ಒಟ್ಟು 40 ಕರಾಟೆ ಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅರ್ಜುನ್ ದಿನೇಶ್ ಅವರು ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಅವರ ಖರ್ಚು ವೆಚ್ಚವನ್ನು ಸಂಸ್ಥೆ ವಹಿಸುತ್ತಿದೆ. ಶುಭಂ ಎಸ್. ಅಂಚನ್ ಅವರನ್ನು ದಾನಿಗಳ ನೆರವಿನೊಂದಿಗೆ ಸ್ಪರ್ಧೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ನಿಟ್ಟೆ ಶಂಕರ್ ಅಡ್ಯಂತಾಯ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಕೆ., ದ.ಕ. ಕರಾಟೆ ಅಸೋಸಿಯೇಶನ್‌ನ ತಾಂತ್ರಿಕ ನಿರ್ದೇಶಕ, ವಿಕ್ಟರ್ ಡಿಸೋಜಾ, ಸ್ಪರ್ಧಿಗಳಾದ ಅರ್ಜುನ್ ದಿನೇಶ್ ಹಾಗೂ ಶುಭಂ ಎಸ್. ಅಂಚನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net