ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಗೆ ಕರಾಟೆ ಚಾಂಪಿಯನ್ ಪ್ರಶಸ್ತಿ

karate 2
Published on

ಮಡಿಕೇರಿ: ಮಂಗಳೂರಿನ ಗುರುಗೋಜು ರಾಯು ಕರಾಟೆ ಅಕಾಡೆಮಿ ಇಂಡಿಯಾ ವತಿಯಿಂದ ಮಂಗಳೂರಿನ ಕುದ್ರೋಳಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.


೧೦ ವರ್ಷದೊಳಗಿನ ಕರಾಟೆ ವಿಭಾಗದಲ್ಲಿ ದಿಗಂತ್(ದ್ವಿ) ಹಾಗೂ ಕುಮಿತೆ ವಿಭಾಗದಲ್ಲಿ(ತೃ), ೯ ವರ್ಷದೊಳಗಿನ ಕರಾಟೆ ವಿಭಾಗದಲ್ಲಿ ಪೊನ್ನಮ್ಮ(ತೃ), ಕಟಾವಿಭಾಗದಲ್ಲಿ ಜಿ.ವಿ.ಲಿಖಿತ್(ದ್ವಿ), ೧೧ ವರ್ಷದೊಳಗಿನವರಲ್ಲಿ ಕರಾಟೆ ವಿಭಾಗದಲ್ಲಿ ಜನಿತ್(ದ್ವಿ), ೧೨ ವರ್ಷದವರಲ್ಲಿ ಕಟಾವಿಭಾಗದಲ್ಲಿ ಕಾವೇರಿಮನೋಜ್(ಪ್ರ), ಶೋಭಿತ್(ದ್ವಿ), ಕಟಾ ವಿಭಾಗದಲ್ಲಿ ೧೩ ವರ್ಷದವರಲ್ಲಿ ಮೋಹಿತ್(ಪ್ರ) ಹಾಗೂ ಕುಮಿತೆ ವಿಭಾಗದಲ್ಲಿ (ತೃ), ಶಶಿರಾ(ದ್ವಿ) ಹಾಗೂ ಕುಮಿತೆ ವಿಭಾಗದಲ್ಲಿ ೧೪ ವರ್ಷದ ವರುಣ್ ಪ್ರಥಮ ಸ್ಥಾನ ಪಡೆದಿದ್ದಾರೆ.


ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಯನ್ನು ಸಾಧಿಸಿದ್ದಾರೆ. ತರಬೇತಿದಾರರಾದ ಮುಖೇಶ್‌ರವರು ಮಕ್ಕಳ ಪ್ರತಿಭೆಯಲ್ಲಿ ವಿಶ್ವಾಸವನ್ನು ಇಟ್ಟು ಉತ್ತಮ ರೀತಿಯ ತರಬೇತಿ ನೀಡಿ ವಿದ್ಯಾರ್ಥಿಗಳು ಟೂರ್ನಿಯಲ್ಲಿ ಪ್ರಶಸ್ತಿ ಪಡೆದುಕೊಳ್ಳಲು ಸಹಕರಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಮುಖೇಶ್‌ರವರು ಕರಾಟೆ ಚಾಂಪಿಯನ್ ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ.


ಕ್ರೀಡಾ ಚಟುವಟಿಕೆಗಳಲ್ಲಿ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶಾಲೆಯ ಆಡಳಿತ ಮಂಡಳಿಯು ಪ್ರೋತ್ಸಾಹ ನೀಡಿದೆ ಎಂದು ಶಾಲೆಯ ಪ್ರಾಂಶುಪಾಲ ಸರಸ್ವತಿರವರು ತಿಳಿಸಿ ಮಕ್ಕಳಿಗೆ ಮತ್ತು ತರಬೇತಿದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net