

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿ ಇತ್ತೀಚೆಗೆ ಆಲ್ ಇಂಡಿಯಾ ಕೈಜನ್ ಮಾರ್ಷಲ್ ಆರ್ಟ್ಸ್ ಸ್ಪೋರ್ಟ್ಸ್ ಫೆಡರೇಶನ್ ಗೋಜು ರ್ಯೂ ಕರಾಟೆ ಡು ಸೀವಾಕೆ ವತಿಯಿಂದ ವಿಶೇಷ ತರಬೇತಿ ಹಾಗೂ ಗ್ರೇಡಿಂಗ್ ಪರೀಕ್ಷೆ ಏರ್ಪಡಿಸಲಾಗಿತ್ತು.
ಕರಾಟೆ ಮಾಸ್ಟರ್ ಹರ್ಯಾಣಾದ ಪ್ರದ್ಯುಮ್ನ ಗೌರ್ ಅವರು ಪರೀಕ್ಷೆ ಹಾಗೂ ಗ್ರೇಡ್ ಪರೀಕ್ಷೆ ನಡೆಸಿದರು.
ಬ್ಲ್ಯಾಕ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಮಾನ್ವಿಕಾ ಶೆಟ್ಟಿ, ಸಮೀತಾ ಜೋಶಿ, ಪೃಥ್ವಿರಾಜ ಗೌಡ, ಅಮಿತ ನಾಗರೆಡ್ಡಿ, ನಿಖಿಲಕುಮಾರ, ಸಾನ್ವಿ ಎಸ್., ಸಾತ್ಯಾಕಿ ಭಟ್ಟ ಹಾಗೂ ಮಹೇಶ ಎಸ್. ಅವರಿಗೆ ಬ್ಲ್ಯಾಕ್ ಬೆಲ್ಟ್ ಗ್ರೇಡ್ ಪ್ರದಾನ ಮಾಡಲಾಯಿತು.
ಕರಾಟೆ ತರಬೇತಿದಾರ ಶಿಹಾನ್ ಶ್ರೀಕಾಂತ ಸುರಗೊಂಡ ಇದ್ದರು.