

ಬೆಳ್ತಂಗಡಿ: ಕರಾಟೆ ತರಬೇತಿ ವಿದ್ಯಾರ್ಥಿಗಳಿಗೆ ಬೆಲ್ಟ್ ಪ್ರಮೋಷನ್ ಪರೀಕ್ಷೆ ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಶಾಲಾ ಪಠ್ಯೆತರ ಸಂಯೋಜಕಿ ಮಾಲಿನಿ ಜೈನ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪಠ್ಯೆತರ ಚಟುವಟಿಕೆಯಿಂದ ಮಾನಸಿಕ ಹಾಗೂ ಬೌಧಿಕ ಬೆಳವಣಿಗೆ ಉತ್ತಮಗೊಳ್ಳುವುದು ಹಾಗೂ ಸ್ಪರ್ಧೆಗಳಿಗೆ ತಯಾರಾಗುವ ಬಗ್ಗೆ ಅರಿವು ಮೂಡಿಸಿ ಸೀನಿಯರ್ ಬೆಲ್ಟ್ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕರಾಟೆ ಮುಖ್ಯತರಬೇತಿಗಾರ ಹಾಗೂ ಪರೀಕ್ಷಕರು ಮತ್ತು ಅಂತಾರಾಷ್ಟ್ರೀಯ ತೀರ್ಪುಗಾರರಾದ ಸೆನ್ಸಾಯಿ ವಸಂತ ಕೆ.ಬಂಗೇರ ಮಾತನಾಡಿದರು. ಶಾರೀರಿಕ ಶಿಕ್ಷಕಿ ರಾಜಮ್ಮ ಸ್ವಾಗತಿಸಿದರು.