ಕರಾಟೆಯಲ್ಲಿ ಶಿವಾನಂದ ದ್ವಿತೀಯ

IMG-20250925-WA0017.jpg
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹುಬ್ಬಳ್ಳಿ ಉಣಕಲ್ಲ ಐ.ಜಿ. ಹಿರೇಗೌಡರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಶಿವಾನಂದ ಜಾಲಗಾರ ದ್ವೀತಿಯ ಸ್ಥಾನ ಪಡೆದಿದ್ದಾನೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಕ್ರೀಡಾಪಟುವನ್ನು ಸನ್ಮಾನಿಸಿದರು.

ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ, ಎಸ್.ಎಂ. ಶಿರೂರ, ಐ.ಬಿ. ಪಾಟೀಲ, ಆರ್.ಎಸ್. ಹನ್ನಿ, ಎಸ್.ಎಂ. ಸೋಮನಗೌಡರ, ಜಿ.ಎಲ್. ಸತ್ಯನ್ನವರ, ಮಲ್ಲಿಕಾರ್ಜುನ ಹೊರಕೇರಿ, ಸಂತೋಷ ಸೋಗಿ, ಗಿರಿಗೌಡರ, ಮೇಘಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net