ಕರಾಟೆಯಲ್ಲಿ ವಾಜಪೇಯಿ ಶಾಲಾ ಮಕ್ಕಳ ಸಾಧನೆ

karate
Published on

ಭಾಗಮಂಡಲ:

ಸಮೀಪದ ಕೋರಂಗಾಲ ಗ್ರಾಮದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಹುಣಸೂರಿನ ಬಿ.ಜಿ.ಎಸ್. ಸಭಾಂಗಣದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವೈಟ್ ಬೆಲ್ಟ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗಳಿದ್ದಾರೆ. ಕಥ ಮತ್ತು ಕುಮಿತೆ ವಿಭಾಗದಲ್ಲಿ ಹಲವಾರು ಪದಕಗಳು ಮತ್ತು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶಾಲೆಯ ಪ್ರಾಂಶುಪಾಲ ಲೋಕೇಶ್, ನಿಲಯ ಪಾಲಕ ದೀಪಕ್ ಕೆ.ಕೆ. ಸಹಕಾರದಲ್ಲಿ ಕರಾಟೆ ಶಿಕ್ಷಕ ದಿಲೀತ್ ಉತ್ತಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಪವನ್ ಸಾಗರ್ ಕೆ.ಪಿ. ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net