ಕರಾಟೆಯಲ್ಲಿ ಕುಶಾಲನಗರದ 21 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

karate
Published on

ಕುಶಾಲನಗರ:

ಕುಶಾಲನಗರದ ಸಂಕೇತ್ ನೇತೃತ್ವದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ 21 ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿ ಪೂರ್ವ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ. ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಆಶ್ರಯದಲ್ಲಿ ಈಚೆಗೆ ಗೋಣಿಕೊಪ್ಪದ ಕಾವೇರಿ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 14/17 ಮತ್ತು 19 ವಯೋಮಿತಿಯ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿ ಈ ಸಾಧನೆ ಮಾಡಿದ್ದಾರೆ. ದಕ್ಷಿಣ ಭಾರತ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಮಾಚಯ್ಯ ನೇತೃತ್ವದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು 7 ಬೆಳ್ಳಿ ಪದಕಗಳನ್ನೂ ಪಡೆದಿದ್ದಾರೆ.

ಕುಶಾಲನಗರ ಫಾತಿಮ ಕಾನ್ವೆಂಟ್‌ನ ಮುಕುಂದ್, ಮಿಥುನ್, ಕುಲದೀಪ್, ದಕ್ಷ, ದಿವಿತ್, ರಶ್ಮಿ, ಲಕ್ಷಿತ್, ಕೂಡ್ಲೂರು ಯೂನಿಕ್ ಅಕಾಡೆಮಿಯ ಇಂಪನ, ಬಿ.ಎಸ್., ಹಿತೇಶ್, ಕೃತಿಕ, ಪ್ರಣಿತ ನಾಯಕ್ ಇತರ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್, ಮುಗಿಲ್ ವರ್ಣನ್, ರಿಷಿಕಾ, ಸಮರ್ಥ್, ವಂಶಿಕ್, ಅಲೆನ್ ತೋಮೋಸ್ ಹಾಗೂ ಕಾಲೇಜು ವಿಭಾಗದಲ್ಲಿ ಪ್ರತಿಕ್ಷ, ತೆವೀಣ್ ಕಣ್ಣನ್ ಮತ್ತು ಕೀರ್ತಿ ಕುಮಾರ್ ಚಿನ್ನದ ಪದಕ ಗಳಿಸಿ ದಾವಣಗೆರೆ, ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ಅಧ್ಯಕ್ಷ ಅರುಣ್ ಎನ್.ಎಸ್., ಸಂಸ್ಥೆಯ ಉಪಾಧ್ಯಕ್ಷ ಚಂದ್ರು ಹಾಗೂ ಕಾರ್ತಿಕ್ ನೇತೃತ್ವದಲ್ಲಿ ಮಕ್ಕಳನ್ನು ತರಬೇತುಗೊಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net