ಕರಾಟೆಯಿಂದ ಬದುಕು ಸುಭದ್ರ

30Kush01
Published on


ಕುಶಾಲನಗರ : ಕರಾಟೆಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಪ್ರಾಪ್ರಿಯಾಗುವುದರೊಂದಿಗೆ ಬದುಕೂ ಸುಭದ್ರವಾಗಲಿದೆ ಎಂದು ತರಬೇತುದಾರ ಸಂಕೇತ್ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಿವಮೊಗ್ಗದ ನೆಹರು ಒಳಾಂಗಣ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಬಹುಮಾನ ವಿಜೇತರಾದ ಕುಶಾಲನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆ ವಿದ್ಯಾರ್ಥಿಗಳನ್ನು ಗುರುವಾರ ಅಭಿನಂದಿಸಿ ಅವರು ಮಾತನಾಡಿದರು.
ಕರಾಟೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ದೈಹಿಕ, ಮಾನಸಿಕ ಸದೃಢತೆಯನ್ನೂ ಗಳಿಸಿಕೊಳ್ಳಬಹುದು. ಉತ್ತಮ ತರಬೇತುದಾರರಾದರೆ ಜೀವನ ನಿರ್ವಹಣೆಗೂ ನೆರವಾಗುತ್ತದೆ ಎಂದರು.
14 ವರ್ಷದ ವಯೋಮಿತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಇಂಪನಾ (ಚಿನ್ನದ ಪದಕ), ದ್ವಿತೀಯ ಸ್ಥಾನ ಪಡೆದ ಬ್ರಿಜೇಶ್ ಹಾಗೂ ತೆವೀನ್ (ಬೆಳ್ಳಿ ಪದಕ), ತೃತೀಯ ಬಹುಮಾನ ಪಡೆದ ಹಿತೇಶ್ ಮತ್ತು ಮುಕುಂದ್ (ಕಂಚಿನ ಪದಕ) ಅವರನ್ನು ಗೌರವಿಸಲಾಯಿತು. ಪಾಲಕರಾದ ಬಿದ್ದಪ್ಪ, ಮಹೇಶ್, ರಮೇಶ್, ಕೃಷ್ಣ, ಪಿ.ಬಿ.ಸರಸ್ವತಿ, ಮಮತಾ, ಸುಮಲತಾ, ಅನಿತಾ ಸಂತೋಷ್, ನಳಿನಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net