

ಮಡಿಕೇರಿ:
ಮಲೇಷ್ಯಾದಲ್ಲಿ ಇದೇ ತಿಂಗಳು ೧೨ ರಿಂದ ೧೪ರ ತನಕ ನಡೆದ ೧೯ ನೇ ಅಂತರರಾಷ್ಟ್ರೀಯ ಓಕಿನಾವ ಗೊಜು - ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್ ಶಿಪ್ - ೨೦೨೩ ಬಾಲಕರ (೭ -೧೦ ವರ್ಷ) ವಿಭಾಗದಲ್ಲಿ ಕೊಡಗಿನ ನಂಜರಾಯಪಟ್ಟಣದ ಕೊಳ್ಳೀರ ಯೋಗೇಶ್ ಮತ್ತು ರಮ್ಯಾ ದಂಪತಿಯ ಪುತ್ರ ಭವಿನ್ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕಗಳೊಂದಿಗೆ ಭಾರತದಕ್ಕೆ ಕೀರ್ತಿಗೆ ತಂದಿದ್ದಾನೆ.
ಕಟ ವಿಭಾಗದಲ್ಲಿ ಜಪಾನ್ ಪ್ರತಿಸ್ಪರ್ಧಿ ಜೊತೆಯಲ್ಲಿನ ಸೆಣಸಾಟದಲ್ಲಿ ಬೆಳ್ಳಿ ಪದಕ ಮತ್ತು ಕುಮಿಟಿ ವಿಭಾಗದಲ್ಲಿ ಮಲೇಷ್ಯಾ ಪ್ರತಿಸ್ಪರ್ಧಿಯೊಂದಿಗೆ ವಿಜೇತನಾಗಿ ಚಿನ್ನದ ಪದಕ ಪಡೆದಿದ್ದಾನೆ. ಬೆಂಗಳೂರಿನ ಇಂಡಿಯನ್ ಏರ್ಫೋರ್ಸ್ ಶಾಲೆಯಲ್ಲಿ ೩ನೇ ತರಗತಿಯ ವಿದ್ಯಾರ್ಥಿಯಾದ ಈತನಿಗೆ ಡಾ. ಎಸ್. ಷಣ್ಮುಗಮ್ ಮಾರ್ಗದರ್ಶನ ನೀಡಿದ್ದರು.