

ಮಡಿಕೇರಿ:
ಮಲೇಷ್ಯಾದಲ್ಲಿ ಇದೇ ತಿಂಗಳು ೧೨ ರಿಂದ ೧೪ ರ ತನಕ ನಡೆಯಲಿರುವಂತ ೧೯ನೇ ಅಂತರ ರಾಷ್ಟ್ರೀಯ ಓಕಿನಾವ ಗೊಜು - ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್ ಶಿಪ್ - ೨೦೨೩ ಬಾಲಕರ (೭ -೧೦ ವರ್ಷದೊಳಗಿನ) ವಿಭಾಗದಲ್ಲಿ ಕೊಡಗಿನ ನಂಜರಾಯಪಟ್ಟಣದ ಕೊಳ್ಳೀರ ಯೋಗೇಶ್ ರಮ್ಯಾ ದಂಪತಿಯ ಪುತ್ರ ಭವಿನ್ ಆಯ್ಕೆಯಾಗಿದ್ದಾನೆ.
ಈತ ಡಾ. ಷಣ್ಮುಗಮ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಬೆಂಗಳೂರಿನ ಇಂಡಿಯನ್ ಏರ್ಫೋರ್ಸ್ ಶಾಲೆಯಲ್ಲಿ ೩ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.