

ಕಾರಟಗಿ: ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಏ.27ರ ಬೆಳಗ್ಗೆ 11ಕ್ಕೆ 108ನೇ ಹಾಗೂ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ, ವಿಶೇಷ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ತಿಳಿಸಿದರು.
ಪಟ್ಟಣದ ಎಪಿಎಂಸಿಯಲ್ಲಿನ ಕಸಾಪ ಘಟಕದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಿಳಿವಳಿಕೆ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಷಿ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ ಎಲ್ಲ ಆಜೀವ ಸದಸ್ಯರು ಪಾಲ್ಗೊಳ್ಳಬೇಕು ಎಂದರು.
ಕಸಾಪ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಕಸಾಪ ಕನಕಗಿರಿ ವಿಧಾನಸಭಾ ಘಟಕದ ಮಾಜಿ ಅಧ್ಯಕ್ಷ ಬಸವರಾಜ ರ‌್ಯಾವಳದ, ಆಜೀವ ಸದಸ್ಯರಾದ ಪ್ರಲ್ಹಾದ ಜೋಷಿ, ಹನುಮಂತಪ್ಪ ತೊಂಡಿಹಾಳ, ಅಯ್ಯಪ್ಪ ಉಪ್ಪಾರ, ವೀರೇಶ ಗದ್ದಿ ಮುದುಗಲ್, ಅಮರೇಶ ಪಾಟೀಲ್, ಇಬ್ರಾಹಿಂ ಆಮದಿಹಾಳ ಇತರರಿದ್ದರು.