

ಕಾರಟಗಿ: ತಾಲೂಕಿನ ಈಳಿಗನೂರು ಕ್ರಾಸ್‌ನಿಂದ ಉಳೇನೂರು ಸಂಪರ್ಕಿಸುವ ರಸ್ತೆ ಕಾಮಗಾರಿ ವೇಗ ಪಡೆಯದ ಕಾರಣ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ಈಳಿಗನೂರು ಕ್ರಾಸ್‌ನಿಂದ ಉಳೇನೂರುವರೆಗೆ 4 ಕಿ.ಮೀ ರಸ್ತೆ ಕಾಮಗಾರಿ 6 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆ ಕಾಮಗಾರಿ ಅನುಷ್ಠ್ಠಾನ ಮಾಡುತ್ತಿದ್ದು, ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಮಳೆಯಿಂದಾಗಿ ತಡವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ರಸ್ತೆಯನ್ನು ಮರಂಹಾಕಿ ಗಟ್ಟಿಗೊಳಿಸಲಾಗಿದೆ.
ಅದರ ಮೇಲೆ ಬೆಂಚಿಗಳನ್ನು ಹಾಕಲಾಗಿದೆ. ಆದರೆ, ರಸ್ತೆ ತುಂಬೆಲ್ಲ ಬೆಂಚಿಗಳು ಎದಿದ್ದು, ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನ ಸಂಚರಿಸಲು ಹರಸಾಹಸ ಪಡುವಂತಾಗಿದೆ. ಹೀಗಾಗಿ ಶೀಘ್ರವೇ ರಸ್ತೆ ಕಾಮಗಾರಿ ಮುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆಯಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಶೀಘ್ರವೇ ಡಾಂಬರೀಕರಣ ಮಾಡಲಾಗುವುದು. ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿ ಕ್ರಮವಹಿಸುತ್ತೇವೆ.
ವಿಶ್ವನಾಥ ಎಇಇ, ಜಿಡಬ್ಲುೃಡಿ