ಮರಳು ಅಕ್ರಮ ಸಾಗಣೆ ಟ್ರಾೃಕ್ಟರ್ ವಶ

MARALU
ಕಾರಟಗಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನ್ನು ತಹಸೀಲಗ್ದಾರ್ ಎಂ.ಕುಮಾರಸ್ವಾಮಿ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಭಾನುವಾರ ರಾತ್ರಿ ವಶಪಡಿಸಿಕೊಂಡಿದೆ.
Published on

ಕಾರಟಗಿ: ತುಂಗಭದ್ರಾ ನದಿಯಿಂದ ಟ್ರ್ಯಾಕ್ಟರ್‌ಗಳ ಮೂಲಕ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ತಹಸೀಲ್ದಾರ್ ಎಂ.ಕುಮಾರಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಭಾನುವಾರ ರಾತ್ರಿ ದಾಳಿ ನಡೆಸಿ ಟ್ರಾೃಕ್ಟರ್‌ವೊಂದನ್ನು ವಶಕ್ಕೆ ಪಡೆದಿದೆ.

ಐದು ಟ್ರಾೃಕ್ಟರ್‌ಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುವ ಖಚಿತ ಮಾಹಿತಿಯೊಂದಿಗೆ ತಂಡ ದಾಳಿ ನಡೆಸಿದೆ. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ನಾಲ್ಕು ಟ್ರ್ಯಾಕ್ಟರ್ ಚಾಲಕರು ಮನಸೋ ಇಚ್ಛೆ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಬೆನ್ನಟ್ಟಿದ ತಂಡ, ಸಿನಿಮಿಯ ರೀತಿಯಲ್ಲಿ ಒಂದು ಟ್ರಾೃಕ್ಟರ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಉಳಿದೊಂದು ಟ್ರ್ಯಾಕ್ಟರ್ ಚಾಲಕ ತಪ್ಪಿಸಿಕೊಳ್ಳಲು ಹೋಗಿ ಇಂಜಿನನ್ನು ಚರಂಡಿಗೆ ನುಗ್ಗಿಸಿದ್ದಾನೆ.

ಇದರಿಂದ ಗಾಬರಿಗೊಂಡ ಅಧಿಕಾರಿಗಳು, ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಪ್ರಾಣ ರಕ್ಷಿಕೊಳ್ಳಲು ಮುಂದಾಗಿದ್ದಾರೆ. ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಗ್ರಾಮಲೆಕ್ಕಾಧಿಕಾರಿಗಳಾದ ದೊಡ್ಡನಗೌಡ, ಗಂಗಪ್ಪ, ಸಂತೋಷ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರ್ಯಾಕ್ಟರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net