ಶ್ರೀ ಶರಣಬಸವೇಶ್ವರ ಪುರಾಣ ಮಂಗಲ; ಮೈಲಾಪುರದಲ್ಲಿ ಜೋಡು ರಥೋತ್ಸವ ಅದ್ದೂರಿ

010922 Mailapura Kumba Meravanige
Published on

ಕಾರಟಗಿ: ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ 67ನೇ ವರ್ಷದ ಪುರಾಣ ಮಹಾಮಂಗಲ ಹಾಗೂ ಜೋಡು ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಶ್ರೀಶರಣಬಸವೇಶ್ವರರ ಮೂರ್ತಿಗೆ ವಿಶೇಷ ಮಹಾರುದ್ರಾಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಕಲ ವಾದ್ಯ ಮೇಳ, ಮಹಿಳೆಯರು ಕುಂಭ-ಕಳಸದೊಂದಿಗೆ ಗಂಗೆಸ್ಥಳ ಪೂಜೆ ನೆವೇರಿಸಲಾಯಿತು. ಚಿಕ್ಕೇನಕೊಪ್ಪದ ಶಿವಶಾಂತವೀರ ಶರಣರು, ಹೆಬ್ಬಾಳ ಬೃಹನ್ಮಠದ ಡಾ.ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಪುರಾಣ ಮಹಾಮಂಗಲಗೊಂಡಿತು.

ಶ್ರೀಬಸವ ಸೇವಾ ಟ್ರಸ್ಟ್ ಹಾಗೂ ಗಂಗಾವತಿಯ ಗೋಪಿ ಚಾರಿಟಬಲ್ ರಕ್ತ ಭಂಡಾರ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಬಸವರಾಜ ದಢೇಸುಗೂರು, ಮಾಜಿ ಸಚಿವ ಶಿವರಾಜ ತಂಗಡಗಿ, ಬಿಜೆಪಿಯ ಗಾಯತ್ರಿ ತಿಮ್ಮಾರೆಡ್ಡಿಗೌಡ ಗಿಲ್ಲೇಸುಗೂರು ಚಾಲನೆ ನೀಡಿದರು. ನೂರಾರು ಜನರು ರಕ್ತದಾನ ಮಾಡಿ ಭಕ್ತಿ ಮೆರೆದರು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜೋಡು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಗುಡೂರು, ಸೋಮನಾಳ, ಬೇವಿನಾಳ, ನವಲಿ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net