ವಧು-ವರರಿಗೆ ಮಠಾಧೀಶರ ಶುಭ ಹಾರೈಕೆ

mass marriage
ಕಾರಟಗಿ ತಾಲೂಕು ಸಿಂಗನಾಳದಲ್ಲಿ ಕಲಬುರಗಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಐದು ಜೋಡಿ ಸಾಮೂಹಿಕ ವಿವಾಹ ನಡೆಯಿತು. ಪ್ರಮುಖರಾದ ತಿಮ್ಮಣ್ಣ ಕನಕರೆಡ್ಡಿ, ಸುರೇಶ ಗೋನಾಳ, ಷಣ್ಮುಖಪ್ಪ ಸಾಹುಕಾರ, ವೀರಭದ್ರೇಗೌಡ ಇತರರಿದ್ದರು.
Published on

ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಮಹಾ ದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಹಾಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಬುಧವಾರ ನಡೆದವು.

ಬೆಳಗ್ಗೆ ದೇವಸ್ಥಾನದಲ್ಲಿ ಶರಣಬಸವೇಶ್ವರ ಮೂರ್ತಿಗೆ ಪೂಜೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಲಂಕಾರ ಸೇರಿ ಪೂಜಾ ಕಾರ್ಯಗಳು ಜರುಗಿದವು. ಬಳಿಕ ಕುಂಭ-ಕಳಸ ಕನ್ನಡಿ ಹೊತ್ತ ಸುಮಂಗಲೆಯರು ಹಾಗೂ ಭಾಜಾ ಭಜಂತ್ರಿಯೊಂದಿಗೆ ಗಂಗೆಸ್ಥಳಕ್ಕೆ ಹೊಗಿ ಪೂಜೆ ಸಲ್ಲಿಸಲಾಯಿತು. ನಂತರ ಮೆರವಣಿಯೊಂದಿಗೆ ದೇವಸ್ಥಾನಕ್ಕೆ ಬರಲಾಯಿತು. ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 5 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಸಾನ್ನಿಧ್ಯ ವಹಿಸಿದ್ದ ವಿವಿಧ ಮಠಾಧೀಶರು ವಧು-ವರರಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು.

ಸಂಜೆ ಉಚ್ಛಾಯ, ರಾತ್ರಿ ದೇವಸ್ಥಾನದಲ್ಲಿ ಪುರಾಣ ಮಹಾಮಂಗಲ ಕಾರ್ಯಕ್ರಮ ಜರುಗಿತು. ಗ್ರಾಮಸ್ಥರಾದ ತಿಮ್ಮಣ್ಣ ಕನಕರೆಡ್ಡಿ, ಸುರೇಶ ಗೋನಾಳ, ಷಣ್ಮುಖಪ್ಪ ಸಾಹುಕಾರ, ವೀರಭದ್ರೇಗೌಡ, ಮಹೇಶ ಸಿಂಗನಾಳ, ರಾಜಶೇಖರ ಸಿಂಗನಾಳ, ಚಂದ್ರಶೇಖರ, ಪಂಪಾಪತಿ ಸಾಹುಕಾರ, ಪಂಪಾಪತಿ ಎಚ್. ಸಾಹುಕಾರ, ಜಗದೀಶಪ್ಪ, ತಿಮ್ಮಣ್ಣ ಗೋನಾಳ, ಪಂಪಾಪತಿ ಕನಕರೆಡ್ಡಿ. ಶರಣಪ್ಪ ಎಸ್. ಸಾಹುಕಾರ, ಶೇಖರಗೌಡ ಪಾಟೀಲ್, ಯಂಕಪ್ಪ ಗೋನಾಳ, ಸೋಮಣ್ಣ ಹಗೆದಾಳ, ಛತ್ರಪ್ಪ ಐನಾಯಕ, ಮಲ್ಲಿಕಾರ್ಜುನ ಸಂಗಾಪುರ, ಲಕ್ಷ್ಮೀಕಾಂತ ಜಿರಾಳ, ಹನುಮೇಶ್ ಕುಂಟೋಜಿ ಹಾಗೂ ದೇವಸ್ಥಾನ ಸಮಿತಿಯವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net