ಕಾರಟಗಿ ತಾಲೂಕಿನಲ್ಲಿ ಮಳೆ ಅಬ್ಬರ; ತುಂಬಿ ಹರಿದ ಹಳ್ಳ-ಕೊಳ್ಳ

27082022 siddapura
Published on

ಸಿದ್ದಾಪುರ: ಕಾರಟಗಿ ತಾಲೂಕಾದ್ಯಂತ ಶನಿವಾರ ಸುರಿದ ಧಾರಾಕಾರ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಹೋಬಳಿ ವ್ಯಾಪ್ತಿಯ ಬರಗೂರು, ಕೊಟ್ನೇಕಲ್, ಜಮಾಪುರ, ಸಿದ್ದಾಪುರ, ಬೆನ್ನೂರು, ನಂದಿಹಳ್ಳಿ, ಕಕ್ಕರಗೋಳ, ಗುಂಡೂರು, ಸಿಂಗನಾಳ ಸೇರಿ ಇತರ ಗ್ರಾಮಗಳಲ್ಲಿ ಮಳೆಯಾಗಿದೆ. ಮತ್ತೊಂದೆಡೆ ಹಳ್ಳದ ಪಕ್ಕದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಭತ್ತದ ಬೆಳೆ ಹಾನಿಗೊಳಗಾಗಿದೆ. ಈಗಾಗಲೇ ರೈತರು, ಬೆಳೆ ನಿರ್ವಹಣೆಗೆ ರಸಗೊಬ್ಬರ ಸಿಂಪಡಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಾವಿರಾರು ರೂ. ವ್ಯಯಿಸಿದ್ದಾರೆ. ಸದ್ಯ ಭತ್ತದ ಗದ್ದೆಗೆ ನೀರು ನುಗ್ಗಿರುವುದರಿಂದ ಬೆಳೆ ಹಾನಿಗೊಳಗಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net