ಕಾರಟಗಿಯಲ್ಲಿ ಶ್ರೀ ಶರಣಬಸವೇಶ್ವರ ಜೋಡು ರಥೋತ್ಸವ ಅದ್ದೂರಿ; ಭಕ್ತರು ಹೂ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ

06092022 Karatagi jodu rathostava
Published on

ಕಾರಟಗಿ: ಪಟ್ಟಣದ ಆರಾಧ್ಯದೈವ ಕಲಬುರಗಿ ಶ್ರೀಶರಣಬಸವೇಶ್ವರರ 23ನೇ ವರ್ಷದ ಜೋಡು ರಥೋತ್ಸವ ಸೋಮವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಶರಣಬಸವೇಶ್ವರ ಹಾಗೂ ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ವಿಶೇಷ ಅಲಂಕಾರ, ಪ್ರಸಾದ, ತೀರ್ಥ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ದೇವಸ್ಥಾನ ಸಮಿತಿ ಸದಸ್ಯರು ಜೋಡು ರಥಕ್ಕೆ ಪೂಜೆ ಸಲ್ಲಿಸಿ ಕಲಶಾರೋಹಣ ನೆರವೇರಿಸಿ, ಶರಣಬಸವೇಶ್ವರ ಹಾಗೂ ಗಣೇಶನ ಬೆಳ್ಳಿ ಮೂರ್ತಿ ಪ್ರತಿಷ್ಠಾಪಿಸಿದರು. ಬಳಿಕ ಜೋಡು ರಥೋತ್ಸವ ಸುಂಕಲಮ್ಮ ಬಯಲಿನ ಬಸವಣ್ಣನ ದೇವಸ್ಥಾನ ತಲುಪಿ ಶರಣಬಸವೇಶ್ವರ ದೇವಸ್ಥಾನಕ್ಕೆ ಹಿಂತಿರುಗಿಸಲಾಯಿತು. ಬೇವಿನಾಳ, ನಾಗನಕಲ್, ಬಸವಣ್ಣಾಕ್ಯಾಂಪ್, ಮೈಲಾಪುರ, ಗುಡದೂರು ಸೇರಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಜೋಡು ರಥಗಳಿಗೆ ಹೂ, ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಹಿರೇಮಠದ ಮರುಳಸಿದ್ದಯ್ಯಸ್ವಾಮಿ, ದೇವಸ್ಥಾನದ ಅರ್ಚಕ ಮುತ್ತಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net