ಭತ್ತ ಒಣಗಿಸಲು ರೈತರ ಹರಸಾಹಸ

siddapura halla
ಭಾನುವಾರ ಸುರಿದ ಮಳೆಯಿಂದಾಗಿ ಸಿದ್ದಾಪುರದ ಹಳ್ಳ ತುಂಬಿ ಹರಿಯುತ್ತಿರುವುದು.
Published on

ಕಾರಟಗಿ: ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಿದ್ದಾಪುರ, ಮರ್ಲಾನಹಳ್ಳಿ, ಬರಗೂರು, ಕೊಟ್ನೇಕಲ್, ಗುಂಡೂರು, ಯರಡೋಣ, ಬೂದಗುಂಪಾ ಸೇರಿ ಇತರೆಡೆ ಭರ್ಜರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಈಗಾಗಲೇ ಭತ್ತದ ಬೆಳೆ ಕಟಾವು ಮಾಡಿದ ಜಮೀನುಗಳಲ್ಲಿ ಮಳೆ ನೀರು ನಿಂತಿವೆ. ಗ್ರಾಮೀಣ ಭಾಗದ ರಸ್ತೆಗಳು ಮಳೆಯ ಹೊಡೆತಕ್ಕೆ ಕೆಸರು ಮಯವಾಗಿವೆ. ಸಿದ್ದಾಪುರ ಎಪಿಎಂಸಿ ಹಾಗೂ ಗ್ರಾಮದ ಹೊರವಲಯದಲ್ಲಿ ಭತ್ತ ಸಂಗ್ರಹಣೆ ಮಾಡಿದ್ದ ರಾಶಿಗಳಿಗೆ ಮಳೆ ನೀರು ನುಗ್ಗಿದೆ. ಭತ್ತವನ್ನು ಒಣಗಿಸಲು ರೈತರು ಹರಸಾಹಸ ಪಡುವಂತಾಗಿದೆ.

ಕೆಲ ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಏಕಾಏಕಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಭತ್ತ ಒಣಗಿಸಲು ಸಾಧ್ಯವಾಗುತ್ತಿಲ್ಲ. ರಾಶಿಯನ್ನು ಅನೇಕ ದಿನಗಳ ಕಾಲ ಮುಚ್ಚಿಟ್ಟರೆ ಕೆಳ ಭಾಗದ ಭತ್ತ ಮೊಳಕೆ ಒಡೆಯಲಿದೆ. ಹೀಗಾಗಿ ಪದೇ ಪದೇ ಸುರಿಯುತ್ತಿರುವ ಮಳೆ ರೈತರಿಗೆ ಸಮಸ್ಯೆ ತಂದೊಡ್ಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net