

ಕಾರಟಗಿ: ನಟ ಪುನೀತ್ ರಾಜಕುಮಾರ ಅವರ 50ನೇ ಜನ್ಮದಿನ ಹಿನ್ನೆಲೆಯಲ್ಲಿ ತಾಲೂಕು ಸಮುದಾಯ ಆಸ್ಪತ್ರೆ ರೋಗಿಗಳಿಗೆ ತಾಲೂಕು ಈಡಿಗ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಹಾಲು-ಹಣ್ಣು ವಿರಿಸಲಾಯಿತು.
ಗರ್ಭಿಣಿಯರು, ಬಾಣಂತಿಯರು ಹಾಗೂ ಸಾಮಾನ್ಯ ರೋಗಿಗಳಿಗೆ ಹಾಲು-ಹಣ್ಣು- ಬ್ರೆಡ್ ವಿತರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಲಾಯಿತು. ನಂತರ ಪಟ್ಟಣದ ಹೊರವಲಯದ ಹಿಂದುಳಿದ ವರ್ಗದ ವಸತಿ ನಿಲಯ ವಿದ್ಯಾರ್ಥಿಗಳಿಗೆ ಹಾಲು-ಹಣ್ಣು ವಿತರಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಎಪಿಎಂಸಿ ಹಿಂಬದಿಯಿಂದ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿನ ಪುನೀತ್ ರಾಜಕುಮಾರ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಅರ್ಪಿಸಿ ವಂದಿಸಲಾಯಿತು.
ನಗರ ಘಟಕ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಈಡಿಗೇರ್, ಸಂಘಟನಾ ಕಾರ್ಯದರ್ಶಿ ಶರಣಪ್ಪ ಈಡಿಗೇರ್ ಮೈಲಾಪುರ, ಎಂ. ಸಂದೀಪಗೌಡ, ರಮೇಶ ಈಡಿಗೇರ್ ಇದ್ದರು.