ಕಣೆ ಹುಳು ನಿಯಂತ್ರಣಕ್ಕೆ ಮಾರ್ಗದರ್ಶನ ನೀಡಿ; ಕೃಷಿ ಅಧಿಕಾರಿಗಳಿಗೆ ತಾಪಂ ಆಡಳಿತಾಧಿಕಾರಿ ಅಮೀನ್ ಸಾಬ್ ಸೂಚನೆ

21072021 Karatagi KDP Meeting
Published on

ಕಾರಟಗಿ ಕೆಡಿಪಿ ಸಭೆ

ಕಾರಟಗಿ: ತಾಲೂಕಿನಲ್ಲಿ ಭತ್ತದ ಬೆಳೆ ನಾಟಿಗೆ ಸಿದ್ಧತೆ ನಡೆದಿದ್ದು, ಕಣೆ ಹುಳು ನಿಯಂತ್ರಣದ ಬಗ್ಗೆ ರೈತರಿಗೆ ಕೃಷಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಮುಖ್ಯಲೆಕ್ಕಾಧಿಕಾರಿ ಅಮೀನ್ ಸಾಬ್ ಸೂಚಿಸಿದರು.

ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಕಳೆದ ವರ್ಷ ಭತ್ತದ ಬೆಳೆಗೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಕಣೆ ಹುಳು ಬಗ್ಗೆ ಈ ಬಾರಿ ಮುಂಜಾಗ್ರತೆ ವಹಿಸಬೇಕಿದೆ. ರೋಗ ನಿಯಂತ್ರಣ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್, ಬಿಸಿಯೂಟದ ಅಡುಗೆ ಕೋಣೆ, ಕೈ ತೋಟ, ಆಟದ ಮೈದಾನ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ನಡೆಯಿತು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ತುಗ್ಲೆಪ್ಪ ದೇಸಾಯಿ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಗಂಭೀರ ಸಮಸ್ಯೆಗಳಿದ್ದರೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸೂಕ್ತ ರೀತಿಯ ಪರಿಹಾರಗಳನ್ನು ಕಂಡುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಬಾಡಿಗೆ ಕಟ್ಟಡದಲ್ಲಿರುವ ಬಿಸಿಎಂ ವಸತಿ ನಿಲಯಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧಾರ ಕೈಗೊಳ್ಳಲಾಯಿತು. ಸಿಡಿಪಿಒ ಶ್ವೇತಾ ಸಭೆಗೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತವಾಯಿತು. ತಾಪಂ ಇಒ ಚಂದ್ರಶೇಖರ, ಸಹಾಯಕ ನಿರ್ದೇಶಕ ನರಸಪ್ಪ, ಯೋಜನಾಧಿಕಾರಿ ರಾಘವೇಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಹರ್ಷವರ್ಧನ್, ಹಿಮಾಲಯಪ್ಪ, ಡಾ.ಮಹೇಶ, ಗಂಗಪ್ಪ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net