ಸರ್ಕಾರದ ಜಾಗದಲ್ಲಿ ಕ್ಯಾಂಟೀನ್ ನಿರ್ಮಿಸಿ

MANAVI
ಕಾರಟಗಿಯ ಬಿಜೆಪಿ ಮಂಡಲದಿಂದ ಪುರಸಭೆ ವ್ಯವಸ್ಥಾಪಕ ಎಚ್.ಪರಮೇಶ್ವರಪ್ಪಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಪುರಸಭೆ ಸದಸ್ಯರಾದ ಆನಂದ, ಬಸವರಾಜ ಕೊಪ್ಪದ್, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ, ಮುಖಂಡ ಸಿದ್ದು ಯರಡೋಣಾ ಇತರರಿದ್ದರು.
Published on

ಕಾರಟಗಿ: ಪಟ್ಟಣದ ಹೊಸ ಬಸ್‌ನಿಲ್ದಾಣ ಎದುರುಗಡೆ ಉದ್ದೇಶಿತ ಇಂದಿರಾ ಕ್ಯಾಂಟೀನ್ ನಿರ್ಮಾಣ ಸ್ಥಳ ಸಮಸ್ಯೆಯಲ್ಲಿದ್ದು ಸಮಗ್ರ ದಾಖಲೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಮಂಡಲದಿಂದ ಪುರಸಭೆ ವ್ಯವಸ್ಥಾಪಕ ಎಚ್.ಪರಮೇಶ್ವರಪ್ಪಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ಉಪಹಾರ, ಊಟ ದೊರೆಯುವ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿರೋಧವಿಲ್ಲ. ಕಟ್ಟಡ ನಿರ್ಮಾಣಕ್ಕೆ ಉದ್ದೇಶಿತ ಸ್ಥಳ ಸರ್ವೇ ನಂ.295/1 ವಿವಾದದಲ್ಲಿದೆ. ಪ್ರಸ್ತುತ ಸಮುದಾಯ ಆರೋಗ್ಯ ಕೇಂದ್ರ ಅಧೀನದಲ್ಲಿದೆ. ಅವರ ಮೂಲಕ ಜಾಗವನ್ನು ಬಳಸಿಕೊಳ್ಳಲು ಅನುಮತಿ ಪತ್ರ ಪುರಸಭೆ ಅಧಿಕಾರಿಗಳು ಪಡೆದಿದ್ದಾರೆ. ಅಂದು ಇದೇ ಜಾಗದಲ್ಲಿ ಬಸ್‌ನಿಲ್ದಾಣಕ್ಕೆ ತೀರ್ಮಾನಿಸಲಾಗಿತ್ತು.

ದಿನ ತಹಸೀಲ್ದಾರ್ ತಾಂತ್ರಿಕ ತೊಂದರೆಯಿಂದ ಸ್ಥಳ ಸರ್ಕಾರಿ ಅಧೀನಕ್ಕೊಳಪಟ್ಟಿಲ್ಲವೆಂದು ಸಾರಿಗೆ ಇಲಾಖೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಕೊಪ್ಪಳ ಉಪವಿಭಾಗೀಯ ಅಧಿಕಾರಿ ತಡೆಯಾಜ್ಞೆ ನೀಡಿದ್ದಾರೆ. ತರಾತುರಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾದರೆ 87ಲಕ್ಷ ರೂ. ಪೋಲಾಗಲಿದೆ. ಇದನ್ನೇ ಸರ್ಕಾರಿ ಜಾಗದಲ್ಲಿ ನಿರ್ಮಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟದಿಂದ ಭವಿಷ್ಯದಲ್ಲಾಗುವ ನಿರ್ಣಯಗಳಿಗೆ ಪುರಸಭೆ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net