ನರೇಗಾ ಯಶಸ್ಸಿಗೆ ಕಾಯಕ ಬಂಧುಗಳ ಪಾತ್ರ ಮುಖ್ಯ

Training Programme
ಕಾರಟಗಿಯ ತಾಪಂ ಕಚೇರಿಯಲ್ಲಿ ಕಾಯಕ ಬಂಧುಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ತಾಒಂ ಇ.ಒ ಲಕ್ಷ್ಮೀದೇವಿ ಮಾತನಾಡಿದರು. ತಾಪಂ ನರೇಗಾ ಎ.ಡಿ. ವೈ. ವನಜಾ, ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕಿ ವಾಣಿ ಜೋಶಿ ಇದ್ದರು.
Published on

ಕಾರಟಗಿ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದ್ದು, ಇದರ ಯಶಸ್ಸಿಗೆ ಕಾಯಕ ಬಂಧುಗಳ ಪಾತ್ರ ಪ್ರಮುಖವಾಗಿದೆ ಎಂದು ತಾಪಂ ಇ.ಒ. ಲಕ್ಷ್ಮೀದೇವಿ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ ಮೈಸೂರು ಹಾಗೂ ಗ್ರಾಮ ಸ್ವ ರಾಜ್ ಅಭಿಯಾನ-ಕರ್ನಾಟಕ (ನಾಗರಿಕ ಸಮಾಜದ ಸಂಸ್ಥೆಗಳ ಒಕ್ಕೂಟ) ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ನರೇಗಾ ಯೋಜನೆ ತಾಪಂ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನರೇಗಾ ಯೋಜನೆಯ ಕಾಯಕ ಬಂಧುಗಳ ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನರೇಗಾ ಯೋಜನೆಯಡಿ ಗ್ರಾಮೀಣ ಭಾಗವನ್ನು ಅಭಿವೃದ್ಧಿ ಪಡಿಸುವ ಅವಕಾಶ ಕಾಯಕ ಬಂಧುಗಳಿಗೆ ಸಿಕ್ಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಪ್ರಯೋಜನೆ ದೊರಕಿಸಲು ಶ್ರಮವಹಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನರೇಗಾ ಎ.ಡಿ. ವೈ. ವನಜಾ ಮಾತನಾಡಿ, ನರೇಗಾದಡಿ ಅರ್ಹ ಕುಟುಂಬಗಳಿಗೆ ವರ್ಷದಲ್ಲಿ 100 ದಿನ ಕೆಲಸ ಒದಗಿಸಲಾಗಿದೆ. ಪ್ರತಿ ದಿನಕ್ಕೆ 349 ರೂ. ಕೂಲಿ ಪಾವತಿಸಲಾಗುತ್ತಿದೆ ಎಂದರು. ತಾಪಂ ಯೋಜನಾಧಿಕಾರಿ ರಾಘವೇಂದ್ರ, ಕೊಪ್ಪಳ ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕಿ ವಾಣಿ ಜೋಶಿ, ರಾಜ್ಯ ಮಾಸ್ಟರ್ ಟ್ರೈನರ್ ಭುವನೇಶ್ವರಿ, ಜಿಲ್ಲಾ ತರಬೇತುದಾರರಾದ ಸೋಮನಾಥ ಗೌಡರ್, ಷಹನಾಜ್ ಬೇಗಂ, ಕಾಯಕ ಮಿತ್ರರಾದ ರತ್ನಮ್ಮ, ಕಮಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net