ಮಕ್ಕಳು ವಿದ್ಯಾವಂತರಾದರೆ ಭವಿಷ್ಯ ಭದ್ರ

krt-1
ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಶಾಲಾ ದಾಖಲಾತಿ ಆಂದೋಲನ ಕುರಿತು ಜಾಥಾ ನಡೆಸಿದರು.
Published on

ಕಾರಟಗಿ: ಸರ್ಕಾರಿ ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು, ಶಿಕ್ಷಕರು ಗ್ರಾಮದ ಬಸವ ಸೇವಾ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ತಾಲೂಕಿನ ಮೈಲಾಪುರದಲ್ಲಿ 2025-26ನೇ ಸಾಲಿನ ಶಾಲಾ ದಾಖಲಾತಿ ಆಂದೋಲನ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಪ್ರೌಢಶಾಲಾ ಮುಖ್ಯಶಿಕ್ಷಕ ಗುರುಬಸಪ್ಪ ಮಾತನಾಡಿ, ಚಿನ್ನಕ್ಕಿಂತ ಅನ್ನ ಲೇಸು. ಅನ್ನಕ್ಕಿಂತ ಅಕ್ಷರ ಲೇಸು. ಆದ್ದರಿಂದ ಪ್ರತಿಯೊಬ್ಬರೂ ವಿದ್ಯೆ ಕಲಿಯಬೇಕು. ಜೀವನದಲ್ಲಿ ಖದಿಯಲಾಗದ ವಸ್ತು ಎಂದರೆ ಅದು ವಿದ್ಯೆ.

ಮಕ್ಕಳು ವಿದ್ಯಾವಂತರಾದರೆ ಭವಿಷ್ಯ ಭದ್ರವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಸರ್ಕಾರಿ ಶಾಲೆಗಳ ಉಳಿವಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಬಳಿಕ ಮಕ್ಕಳನ್ನು ಶಾಲೆಗೆ ಕಳಿಸಿ-ಸರ್ಕಾರಿ ಶಾಲೆಗಳನ್ನು ಉಳಿಸಿ ಎನ್ನುವುದು ಸೇರಿ ಇತರ ಘೋಷಣೆಗಳನ್ನು ಕೂಗಿದರು. ಬಸವ ಸೇವಾ ಟ್ರಸ್ಟ್ ಅಧ್ಯಕ್ಷ ಅಮರೇಶ್ ಬನ್ನೂರು, ಕಾರ್ಯದರ್ಶಿ ಶರಣಪ್ಪ ಉಪ್ಪಾರ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ದೊಡ್ಡಯ್ಯ ಅಂಗಡಿ, ವಿದ್ಯಾರ್ಥಿಗಳು, ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net