

ಕಾರಟಗಿ: ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಾಣ ಮಾಡಲಾದ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಗುರುವಾರ ವೀಕ್ಷಿಸಿದರು.
ಕೊಪ್ಪಳಕ್ಕೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಲಿದ್ದಾರೆ. ಈ ಹಿನ್ನ್ನೆಲೆಯಲ್ಲಿ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್, ಬ್ಯಾಡ್ಮಿಂಟನ್ ಕೋರ್ಟ್, ಸಂತೆ ಮಾರುಕಟ್ಟೆ ಬಳಿ ನಿರ್ಮಾಣ ಮಾಡಲಾಗಿರುವ ಮಳಿಗೆಗಳನ್ನು ವೀಕ್ಷಿಸಿದರು.
ಸಾರ್ವಜನಿಕರು ಡಿಸಿಗೆ ಮಳಿಗೆ ಬಾಡಿಗೆ ದರ ಹೆಚ್ಚಿರುವ ಕಾರಣ ಯಾರು ಟೆಂಡರ್ ಪಡೆಯುವುದಿಲ್ಲ. ಹೀಗಾಗಿ ಮಳಿಗೆಗಳ ದರ ಕಡಿತಗೊಳಿಸಲು ಮನವಿ ಮಾಡಿದರು. ಇದನ್ನು ಬಳಿಕ ಪರಿಶೀಲನೆ ನಡೆಸುವುದಾಗಿ ಡಿಸಿ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಂಜುನಾಥ ಎಂ. ಗುಂಡೂರು, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಸದಸ್ಯ ಸಂಗನಗೌಡ, ಸಿಬ್ಬಂದಿ ಚನ್ನಬಸವ ಹಿರೇಮಠ, ಮಂಜುನಾಥ ಇತರರಿದ್ದರು.