

ಕಾರಟಗಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಅಮರಪ್ಪ ಇಟ್ಟಂಗಿ ನೇತೃತ್ವದಲ್ಲಿ ಸೋಮವಾರ ಸ್ಥಾಯಿ ಸಮಿತಿ ಸಭೆ ನಡೆಯಿತು.
ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು, ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸುವ ಬಗ್ಗೆ ಮತ್ತು ಪೌರ ಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ಒದಗಿಸುವ ಹಾಗೂ ಕಸ ವಿಲೇವಾರಿ, ನಗರ ಸ್ವಚ್ಛತೆ ಬಗ್ಗೆ ಚರ್ಚಿಸಲಾಯಿತು.
ಸದಸ್ಯರಾದ ಶ್ರೀನಿವಾಸ ರೆಡ್ಡಿ, ರಮೇಶ್ ತಿಪ್ಪಣ್ಣ ನಾಯಕ್, ಆನಂದ್ ಎಂ., ದೊಡ್ಡಬಸವ ಬೂದಿ, ಸುಜಾತಾ, ಮುಖ್ಯಾಧಿಕಾರಿ ಸುರೇಶ್, ಸಿಬ್ಬಂದಿ ನಾಗರಾಜ, ಚನ್ನಬಸವ ಹಿರೇಮಠ ಇತರರಿದ್ದರು.