ಕಾರಟಗಿ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ

NOMENI
ಕಾರಟಗಿ ಪುರಸಭೆಯಿಂದ ನಾಮನಿರ್ದೇಶಿತ ಸದಸ್ಯರನ್ನು ಸೋಮವಾರ ಸನ್ಮಾನಿಸಲಾಯಿತು. ಮುಖ್ಯಾಧಿಕಾರಿ ಸುರೇಶ ಶೆಟ್ಟರ್, ಸದಸ್ಯರಾದ ಎಚ್. ಈಶಪ್ಪ, ಹಿರೇಬಸಪ್ಪ ಸಜ್ಜನ್ ಇತರರಿದ್ದರು.
Published on

ಕಾರಟಗಿ: ಪಟ್ಟಣದ ಪುರಸಭೆಗೆ ನಾಮನಿರ್ದೇಶಿತಗೊಂಡ ಐದು ಜನ ಸದಸ್ಯರ ಪದಗ್ರಹಣ ಸೋಮವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮಾತನಾಡಿ, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಚುನಾಯಿತ ಸರ್ವಸದಸ್ಯರ ಜತೆಗೆ ನಾಮನಿರ್ದೇಶಿತ ಸದಸ್ಯರು ಶ್ರಮಿಸಬೇಕಿದೆ.

ಎಲ್ಲರೂ ಒಗ್ಗೂಡಿ ವಿವಿಧ ಅಭಿವೃದ್ಧಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಿ, ಹಿರಿಯರ ಮಾರ್ಗದರ್ಶನದೊಂದಿಗೆ ಅಗತ್ಯ ಚಟುವಟಿಕೆ ಆರಂಭಿಸಬೇಕಿದೆ. ಕುಡಿವ ನೀರು ಪೂರೈಕೆ, ಸ್ವಚ್ಛತೆ ಸೇರಿದಂತೆ ಅನೇಕ ಕೆಲಸಗಳಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ನಾಮನಿರ್ದೇಶಿತಗೊಂಡ ಬಿ.ಸಿದ್ದಪ್ಪ, ವೀರೇಶ ಗದ್ದಿ ಮುದಗಲ್, ಹನುಮಂತರೆಡ್ಡಿ ರಾಜೀವ್‌ಗಾಂಧಿ ನಗರ, ಶೇಖರಪ್ಪ, ವರಲಕ್ಷ್ಮೀ ನಾಗರಾಜ ಈಡಿಗೇರ್ ಅವರ ಪದಗ್ರಹಣ ಬಳಿಕ ಪುರಸಭೆಯಿಂದ ಸನ್ಮಾನಿಸಲಾಯಿತು. ಬಳಿಕ ನಾಮನಿರ್ದೇಶಿತ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಅವರನ್ನು ಸನ್ಮಾನಿಸಿದರು.

ಪ್ರಮುಖರಾದ ಬಿ.ಶರಣಯ್ಯಸ್ವಾಮಿ, ರುದ್ರಗೌಡ ನಂದಿಹಳ್ಳಿ, ಅಯ್ಯಪ್ಪ ಉಪ್ಪಾರ, ಮಹೇಶ ಕಂದಗಲ್, ಸೋಮನಾಥ ದೊಡ್ಮನಿ, ವೀರೇಶ ಬೇವಿನಾಳ, ನಾಗರಾಜ ಭಜಂತ್ರಿ, ಅಮೃಲ್ ಹುಸೇನ್, ನಾಗರಾಜ ಮೂಲಿಮನಿ, ವೆಂಕಟೇಶ ಈಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net