

ಕಾರಟಗಿ: ಪಟ್ಟಣದ ನೂತನ ಬಸ್ ನಿಲ್ದಾಣ ಪಕ್ಕದಲ್ಲಿ ಆಟೋಗಳ ನಿಲ್ದಾಣಕ್ಕೆ ಜಾಗ ಗುರುತಿಸುವಂತೆ ಆಗ್ರಹಿಸಿ ಆಟೋ ಚಾಲಕರು ಪುರಸಭೆ ಮುಖ್ಯಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.
ಕಳೆದ 20-25 ವರ್ಷಗಳಿಂದ ಪಟ್ಟಣದ ಕನಕದಾಸ ವೃತ್ತದ ಬಳಿ ಇರುವ ಜಾಗವನ್ನು ಆಟೋ ನಿಲ್ದಾಣಕ್ಕೆ ಬಳಸುತ್ತಿದ್ದೆವು. ಈಗ ದಿಢೀರನೆ ಅಲ್ಲಿನ ಅಂಗಡಿ-ಮುಂಗಟ್ಟುಗಳ ಮಾಲೀಕರು ನಿಮ್ಮ ಸ್ಥಳವನ್ನು ಬದಲಾಯಿಸಬೇಕೆಂದು ತಾಕೀತು ಮಾಡಿದ್ದಾರೆ. ಹೀಗಾಗಿ ನೂತನ ಬಸ್ ನಿಲ್ದಾಣ ಪಕ್ಕದಲ್ಲಿಯೇ ಆಟೋ ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಪದಾಧಿಕಾರಿಗಳ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಸುರೇಶ, ಶೀಘ್ರ ಆಟೋ ನಿಲ್ದಾಣ ಜಾಗ ಗುರುತಿಸಿ ಕೊಡುವ ಭರವಸೆ ನೀಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಹನುಮಂತ ಉಪ್ಪಾರ, ಗೌರವಾಧ್ಯಕ್ಷ ಆಶುಭಾಯ್, ಉಪಾಧ್ಯಕ್ಷ ಯಮನೂರ, ಖಜಾಂಚಿ ಮಂಜುನಾಥ ಕುರುಬರ, ಸದಸ್ಯರಾದ ವೀರಭದ್ರಪ್ಪ, ಶರಣಬಸವ ಸುಕಾಲಪೇಟೆ, ರೆಹಮಾನ್, ವಿಶ್ವನಾಥ ಬೈಲ್ ಪತ್ತಾರ, ಸಂತೋಷ ಬೈಲ್ ಪತ್ತಾರ, ಸುನೀಲ್ ಬೈಲ್ ಪತ್ತಾರ, ನಾಗರಾಜ್ ಕಂಪ್ಲಿ, ಶರಣಪ್ಪ ರಾಮನಗರ, ನಬಿಸಾಬ್ ನಾಗನಕಲ್, ಶಾಲಿಮ್‌ಸಾಬ ಆರ್.ಜಿ. ನಗರ, ನಾಗರಾಜ ಬಳ್ಳಾರಿ, ಮಂಜುನಾಥ್ ರೆಡ್ಡಿ, ಹನುಮಂತ ಇಂದಿರಾನಗರ, ಮಹದೇವ ಕುರುಬರ ಇದ್ದರು.