ಅಭಿವೃದ್ಧಿ ಕಾರ್ಯಗಳ ಸ್ಮರಣೆ ಅವಶ್ಯ

Gangavathi Kempegowda birthday
ಗಂಗಾವತಿ ತಾಲೂಕಾಡಳಿತ ಸೌಧದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಜಯಂತಿ ಶುಕ್ರವಾರ ಆಚರಿಸಲಾಯಿತು. ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಶಿರಸ್ತೆ ೀದಾರರಾದ ಪ್ರಕಾಶ ನಾಯ್ಕ, ರವಿಕುಮಾರ ನಾಯಕ್ವಾಡಿ, ಸುನೀಲ್‌ಕುಮಾರ, ಕೃಷ್ಣವೇಣಿ, ಗಾಯತ್ರಿ ಇತರರಿದ್ದರು.
Published on

ಕಾರಟಗಿ: ಬೆಂಗಳೂರನ್ನು ನಿರ್ಮಾಣ ಮಾಡಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡಗೆ ಸಲ್ಲುತ್ತದೆ ಎಂದು ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಹೇಳಿದರು.

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಪೇಗೌಡರು ನವ ಬೆಂಗಳೂರು ಸೇರಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರಿಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿರುವ ಕಾಯಕಗಳು ಎಂದಿಗೂ ಅಜರಾಮರ. ನಾವು ಕೆಂಪೇಗೌಡರ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಬೇಕು ಎಂದರು.ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಮುಖ್ಯಾಧಿಕಾರಿ ಸಾಬಣ್ಣ, ಸಿಬ್ಬಂದಿ ನಾಗರಾಜ ತಳವಾರ, ಚನ್ನಬಸವ ಹಿರೇಮಠ, ಸಮೀರ್, ಮಂಜಮ್ಮ, ಅಕ್ಷತಾ, ಆದೆಪ್ಪ, ಪರಮೇಶ್ವರಪ್ಪ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net