

ಕಾರಟಗಿ: ನನಗೆ ನನ್ನ ವಿದ್ಯಾರ್ಥಿ ಹಾಗೂ ರಾಜಕೀಯ ಜೀವನ ಮತ್ತು ಸಿಎಂ ಸಿದ್ದರಾಮಯ್ಯ ಜೀವನ ಚರಿತ್ರೆ ಬರೆಯುವ ಆಸೆಯಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಡು, ನೆಲ, ಜಲ, ಭಾಷೆಯ ಬಗ್ಗೆ ಅರಿವು ಹಾಗೂ ಅಪಾರ ಗೌರವವಿದೆ. ಬಿಜೆಪಿಯ ಕೆಲವರಿಗೆ ಕ್ಷೇತ್ರ, ಸ್ವಾತಂತ್ರೊೃೀತ್ಸವ, ಸಾಮಾಜಿಕ ನ್ಯಾಯ ಅನ್ನಲು ಬಾರದವರು ನನ್ನ ಬಗ್ಗೆ ಮಾತನಾಡುತ್ತಿರುವುದು ಸೋಜಿಗ. ತಪ್ಪು ಎಲ್ಲರೂ ಮಾಡುತ್ತಾರೆ. ಆದರೆ, ಅದನ್ನು ತಿದ್ದಿ ನಡೆಯುವ ಮನೋಭಾವ ನನಗಿದೆ. ಕೆಲ ಸಾಹಿತಿಗಳು ನನ್ನ ಕುರಿತಾಗಿ ಪ್ರತಿಕ್ರಿಯಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಮೊದಲು ಜೀವರಾಜ್ ಆಳ್ವ, ಎಂ.ಪಿ. ಪ್ರಕಾಶ್ ಮೆರುಗು ತಂದಿದ್ದರು. ಅವರ ಬಳಿಕ ಈಗ ನೀವು ಉತ್ತಮವಾಗಿ ಇಲಾಖೆ ಮುನ್ನೆಡೆಸುತ್ತಿದ್ದಿರಿ ಎಂದಿದ್ದಾರೆ. ಆದರೆ, ಈ ಇಬ್ಬರೂ ನಾಯಕರಷ್ಟು ನಾನು ದೊಡ್ಡವನಲ್ಲ. ಎಂ.ಪಿ. ಪ್ರಕಾಶ್ ಮೇಧಾವಿ, ಆಳ್ವರವರು ಸಂಘಟನೆಯಲ್ಲಿ ಮಾಸ್ಟರ್ ಮೈಂಡ್. ಇವರಿಗೆ ನಾನು ಸಮನಲ್ಲ ಎಂದರು.
ನಾನು ಸಾಹಿತಿ, ಕವಿ, ನಾಟಕಕಾರ ಅಲ್ಲ. ಹೀಗಾಗಿ ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯಗೆ ಪಟ್ಟು ಹಿಡಿದಿದ್ದೆ. ಆದರೆ, ಸಿಎಂ ನನ್ನ ಮೇಲೆ ನಂಬಿಕೆ ಇಟ್ಟು ನೀನು ಈ ಖಾತೆ ಮುನ್ನೆಡೆಸುತ್ತಿಯಾ ಎಂದು ಕೊಟ್ಟರು. ಈಗ ನಡೆಸುತ್ತಿದ್ದೇನೆ ಎಂದು ತಂಗಡಗಿ ಹೇಳಿದರು.
ಇಲಾಖೆ ಬೇಡವೆಂದಿದ್ದೆ