ಸಾಮಾಜಿಕ ಭದ್ರತೆಗೆ ಕಾರ್ಡ್ ವಿತರಣೆ

Card Distribution
ಕಾರಟಗಿಯಲ್ಲಿ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಸುಧಾ ಸಿ. ಗರಗ, ವಿವಿಧ ಕಾರ್ಮಿಕ ಸಂಘದ ಪದಾಧಿಕಾರಿಗಳು, ಕಾರ್ಮಿಕರು ಇದ್ದರು.
Published on

ಕಾರಟಗಿ: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅನುಷ್ಠಾನಗೊಳಿಸಿದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಸುಧಾ ಸಿ. ಗರಗ ಹೇಳಿದರು.

ಪಟ್ಟಣದ ದಲಾಲಿ ಬಜಾರ್‌ನಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಕಾರ್ಮಿಕ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಯೋಜನೆಯಡಿ ಈ ಮುಂಚೆ 11 ಅಸಂಘಟಿತ ಕಾರ್ಮಿಕ ವರ್ಗಗಳಿದ್ದವು. ಈಗ ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಮೆಕ್ಯಾನಿಕ್ಸ್, ಟೈಲರ್ಸ್, ಅಗಸರು ಹಾಗೂ ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ, ಸಿನಿ ಕಾರ್ಮಿಕರು, ನೇಕಾರರು, ಬೀದಿ ಬದಿ ವ್ಯಾಪಾರಿಗಳು ಸೇರಿ ಒಟ್ಟು 23ಕ್ಕೆ ಕಾರ್ಮಿಕ ವರ್ಗಗಳು ವಿಸ್ತರಣೆಯಾಗಿವೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವುದು, ಅಪಘಾತ, ಮರಣ ಅಥವಾ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಆರ್ಥಿಕ ಸಹಾಯ ಓದಗಿಸುವುದು ಕಾರ್ಮಿಕರನ್ನು ಸರ್ಕಾರಿ ಯೋಜನೆಗಳೊಂದಿಗೆ ಏಕಿಕೃತವಾಗಿ ಗುರುತಿಸುವುದು. ಈ ಯೋಜನೆ ಉದ್ದೇಶವಾಗಿದೆ. ಯೋಜನೆ ನೋಂದಣಿ ಉಚಿತವಾಗಿದೆ ಎಂದರು.

ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಚಂದ್ರ ರೆಡ್ಡಿ, ಪ್ರ.ಕಾ. ದೊರೆಸ್ವಾಮಿ, ಉಪಾಧ್ಯಕ್ಷ ಬಾಬು ಮೇಸ್ತ್ರಿ, ಸಹ ಕಾರ್ಯದರ್ಶಿ ಹನುಮೇಶ, ಜಿಲ್ಲಾಧ್ಯಕ್ಷ ಪಂಪಾಪತಿ ಇಂಗಳಗಿ, ಎಲೆಕ್ಟ್ರಿಕಲ್ ಸಂಘದ ಸಲೀಂ ಶಫಿ, ಡ್ರೈವರ್ ಸಂಘದ ಶೇಖರಪ್ಪ ಹೂಗಾರ, ಹಮನುಂತಪ್ಪ ಢಣಾಪುರ, ಚಿರಂಜೀವಿ, ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ವಿಭಾಗೀಯ ಅಧ್ಯಕ್ಷ ಶಿವಕುಮಾರ್ ಗೌಡ, ಡೇಟಾ ಆಪರೇಟರ್‌ಗಳಾದ ಸೂರ್ಯ ಪ್ರಕಾಶ್ ಪಾಟೀಲ್, ಹುಲಗಪ್ಪ, ವಿಜಯಕುಮಾರ ಬೆನ್ನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net