ಕಟ್ಟಿಗೆಹಳ್ಳಿ ಹಿರೇಮಠದಲ್ಲಿ ತಾಮ್ರ ಶಾಸನ ಪತ್ತೆ

08052020 Karatakagi copper inscription
Published on

ಕಾರಟಗಿ: ಪಟ್ಟಣದ ಪುರಾತನ ಕಟ್ಟಿಗೆಹಳ್ಳಿ ಹಿರೇಮಠದಲ್ಲಿ ತಾಮ್ರ ಶಾಸನವಿರುವುದನ್ನು ಮಲ್ಲಿಕಾರ್ಜುನ ನಾಗಪ್ಪ ಪದವಿ ಕಾಲೇಜು ಉಪನ್ಯಾಸಕ ವಿರೂಪಾಕ್ಷೇಶ್ವರ ಸ್ವಾಮಿ ತಲೇಖಾನ್‌ಮಠ ಪತ್ತೆಹಚ್ಚಿದ್ದಾರೆ.

ಈ ಶಾಸನ ವಿಜಯನಗರ ಕಾಲದ್ದು ಎಂದು ಊಹಿಸಲಾಗಿದೆ. ವಿಜಯನಗರದ ಅರಸರು ಕಟ್ಟಿಗೆಹಳ್ಳಿ ಹಿರೇಮಠಕ್ಕೆ ನೀಡಿದ ಶಾಸನ ಇದಾಗಿದ್ದು, ಮೂರು ತಾಮ್ರ ಫಲಕಗಳನ್ನು ಒಳಗೊಂಡಿದೆ. ಒಂದೊಂದು ಫಲಕವು 11.4 ಇಂಚು ಉದ್ದ ಹಾಗೂ 4.6 ಇಂಚು ಅಗಲ ಇವೆ. ಮೂರು ಫಲಕಗಳು ಗುಚ್ಚವನ್ನು 4 ಇಂಚು ಉದ್ದ ಹಾಗೂ 4.5 ಇಂಚು ಅಗಲದ ಮುದ್ರೆ ಉಂಗುರದಿಂದ ಕಟ್ಟಲಾಗಿದೆ. ಮುದ್ರೆ ಉಂಗುರದಲ್ಲಿ ವಿಜಯನಗರ ಅರಸರ ರಾಜಮುದ್ರೆ ವರಾಹದ ಚಿತ್ರವಿದೆ. ಶಾಸನದ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಹಿರಿಯ ಸಂಶೋದಕರೊಂದಿಗೆ ಅಧ್ಯಯನ ನಡೆಸಲಾಗುತ್ತದೆ ಎಂದು ವಿರೂಪಾಕ್ಷೇಶ್ವರ ಸ್ವಾಮಿ ತಲೇಖಾನ್‌ಮಠ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net