

ಕಾರಟಗಿ: ಪಟ್ಟಣದ ಕರಿಯಪ್ಪ ತಾತನ 13ನೇ ವರ್ಷದ ಜಾತ್ರೋತ್ಸವ ಪ್ರಯುಕ್ತ ಸೋಮವಾರ ಗಂಗೆಸ್ಥಳ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಜಾತ್ರೆ ಪ್ರಯುಕ್ತ ಬೆಳಗ್ಗೆಯೇ ಕರಿಯಪ್ಪ ತಾತ, ಕಾಶಿ ವಿಶ್ವನಾಥ ಹಾಗೂ ಆಂಜನೇಯ ಸ್ವಾಮಿ ಮೂರ್ತಿಗಳಿಗೆ ವಿಶೇಷ ಅಭಿಷೇಕ ಮಾಡಲಾಯಿತು. ನಂತರ ಶರಣಬಸವೇಶ್ವರ ದೇವಸ್ಥಾನದಿಂದ ವಾದ್ಯಮೇಳದೊಂದಿಗೆ ಗಂಗೆಸ್ಥಳ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಕಳಸ-ಕನ್ನಡಿ ಹೊತ್ತು ಸುಮಂಗಲೆಯರು ಪಾಲ್ಗೊಂಡಿದ್ದರು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಪುರಸಭೆ ಸದಸ್ಯ ಸೋಮಶೇಖರ ಬೇರಿಗಿ, ದೇವಸ್ಥಾನ ಸಮಿತಿ ಅಧ್ಯಕ್ಷ ಬೂದಿ ಗಿರಿಯಪ್ಪ, ಉಪಾಧ್ಯಕ್ಷ ಶಾಮಣ್ಣ ಈಡಿಗೇರ್, ಪ್ರ.ಕಾರ್ಯದರ್ಶಿ ದ್ಯಾವಣ್ಣ ನರೇರ್, ಪದಾಧಿಕಾರಿಗಳಾದ ದೊಡ್ಡಪ್ಪ ಕಂದಕೂರು, ಬಸವರಾಜ ಬಂಡಿ, ಶರಣಪ್ಪ ಎಚ್., ಡಾ.ಅಮರೇಶ, ಗುಂಡಪ್ಪ ಹೊನ್ನಳ್ಳಿ, ಯಮನೂರಪ್ಪ ಮಡಿವಾಳರ ಇತರರಿದ್ದರು.