

ಕಾರಟಗಿ: ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಭಾರೀ ಮಳೆ ಸುರಿದಿದ್ದು, ರೈತರ ನಿದ್ದೆ ಗಡೆಸಿದೆ. ಏಕಾಏಕಿ ಗುಡುಗು, ಸಿಡಿಲು ಸಹಿತ ಕಾರಟಗಿ ಪಟ್ಟಣ, ಚೆಳ್ಳೂರು, ಕೆ.ಜೆ. ಕ್ಯಾಂಪ್, ಪನ್ನಾಪುರ ಸೇರಿ ಇತರೆಡೆ ಕೆಲ ಗಂಟೆಗಳ ಕಾಲ ಆಲಿಕಲ್ಲು ಮಳೆ ಸುರಿಯಿತು. ಇದರಿಂದಾಗಿ ತೆನೆ ಬಿಟ್ಟ ಭತ್ತದ ಫಸಲು ನೆಲಕ್ಕುರುಳಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕಾರಟಹಿ ಹೋಬಳಿ ಭಾಗಕ್ಕೆ ಹೊಲಿಸಿದರೆ, ಸಿದ್ದಾಪುರ ಹೋಬಳಿಯಲ್ಲಿ ಕಡಿಮೆ ಮಳೆಯಾಗಿದೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಒಣಗಿಸಲು ಹಾಕಿದ್ದ ಭತ್ತ ಏಕಾಏಕಿ ಮಳೆ ಸುರಿದಿದ್ದರಿಂದ ತೊಯ್ದಿದೆ. ಇನ್ನೊಂದಿಷ್ಟು ದಿನ ಮಳೆರಾಯ ಮರೆಯಾಗಿದ್ದರೆ ಫಸಲು ಕೈಸೇರುತ್ತಿತ್ತು ಎಂದು ಬೆಳೆಗಾರರು ಮಾತನಾಡಿಕೊಳ್ಳುತ್ತಿದ್ದಾರೆ.