

ಕಾರಟಗಿ: ಮಹಾತ್ಮರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮರ ತತ್ವಾದರ್ಶಗಳನ್ನು ನಾವುಗಳು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸಮಾಜ ಸುಧಾರಣೆಗೆ ಹಾಗೂ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಅಪ್ಪಣ್ಣ ಅವಿರತ ಶ್ರಮಿಸಿದ್ದಾರೆ ಎಂದರು.
ಪುರಸಭೆ ಸಿಬ್ಬಂದಿ ಚನ್ನಬಸವ ಹಿರೇಮಠ, ನಾಗರಾಜ ತಳವಾರ, ಮಂಜುನಾಥ, ಪರಮೇಶ್ವರಪ್ಪ, ಸಮೀರ್, ಆದೆಪ್ಪ, ಅಕ್ಷತಾ, ಮಂಜಮ್ಮ ಇತರರಿದ್ದರು.