ದೊರೆತ ಅಧಿಕಾರವನ್ನು ಜನರ ಸೇವೆಗೆ ಬಳಸಿ

TANGADAGI
ಸಿದ್ದಾಪುರ ಗ್ರಾಪಂ ಎಡರನೇ ಅವಧಿಗೆ ಆಯ್ಕೆಯಾದ ಸರ್ವಸದಸ್ಯರು ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿ ಅವರನ್ನು ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಭೋವಿ, ಉಪಾಧ್ಯಕ್ಷ ಗಂಗಪ್ಪ ಸುಂಕದ್, ಪ್ರಮುಖರಾದ ಜನಗಂಡೆಪ್ಪ ಪೂಜಾರ, ಮುರಳಿಕೃಷ್ಣ, ರವಿಚಂದ್ರ ಹೊಸಮನಿ, ಚಂದ್ರುಗೌಡ ಪೊಲೀಸ್ ಪಾಟೀಲ್, ಜಂಭುನಾಥ ಇಟಗಿ, ಪಂಪಾಪತಿ ಮರಕುಂಬಿ, ವೆಂಕಟೇಶ ಬಳ್ಳಾರಿ ಇತರರಿದ್ದರು.
Published on

ಕಾರಟಗಿ: ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಎಲ್ಲರೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜನೋಪಯೋಗಿ ಆಡಳಿತ ನಡೆಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ತಾಲೂಕಿನ ಸಿದ್ದಾಪುರ ಗ್ರಾಪಂಗೆ ಎರಡನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜನರ ಸೇವೆಗಳಿಗೆ ಕೈಗೆಟಕುವ ಗ್ರಾಪಂ ಆಡಳಿತವನ್ನು ಅತ್ಯಂತ ಜನೋಪಯೋಗಿ ಕಾರ್ಯರೂಪಕ್ಕೆ ತರಬೇಕು. ಗ್ರಾಪಂನ ಸರ್ವಸದಸ್ಯರು ಪಕ್ಷ ಭೇದ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಉತ್ತಮ ಆಡಳಿತ ನೀಡುವ ಮೂಲಕ ಜನಮಾನಸದಲ್ಲಿ ಉಳಿಯಬೇಕು. ಬಡ ಜನತೆಗೆ ಕೆಲಸ ಕಾರ್ಯಗಳನ್ನು ಮಾಡಿಕೊಡುವಲ್ಲಿ ವೃಥಾ ಅಲೆದಾಡಿಸಬಾರದು.

ಜನರಿಂದ ದೊರೆತ ಅಧಿಕಾರವನ್ನು ಅವರ ಅನುಕೂಲಕ್ಕೆ ಬಳಸಿದರೆ ಸದಾ ನೆನಪಿನಲ್ಲಿ ಉಳಿಯುತ್ತೇವೆ. ಅಂತಹ ಮಹತ್ವದ ಕಾರ್ಯವನ್ನು ಸಿದ್ದಾಪುರ ಆಡಳಿತ ಮಂಡಳಿ ಮಾಡಲಿ ಎಂದು ಆಶಿಸುತ್ತೇನೆ ಎಂದರು. ಎರಡನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು ಸಚಿವ ತಂಗಡಗಿಯನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net