

ಗಂಗಾವತಿ: ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕಾ ಪ್ರಮಾಣ ಹೆಚ್ಚಿಸಲಾಗುತ್ತಿದ್ದು, ಶೈಕ್ಷಣಿಕ ಸೌಲಭ್ಯಗಳನ್ನು ಪಾಲಕರು ಸದ್ಬಳಕೆ ಮಾಡಿಕೊಳ್ಳುವಂತೆ ಕಾರಟಗಿ ವಲಯ ಶಿಕ್ಷಣ ಸಂಯೋಜಕ ಪಿ.ಸಿ.ರಾಘವೇಂದ್ರ ಹೇಳಿದರು.
ತಾಲೂಕಿನ ಆಚಾರನರಸಾಪುರದ ಸ.ಹಿ.ಪ್ರಾ. ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮರಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಟೋಟಗಳು ಮತ್ತು ಕಲಿಕಾ ಸಾಮಾಗ್ರಿಗಳೊಂದಿಗೆ ಮಕ್ಕಳಲ್ಲಿನ ಕಲಿಕೆ ಜಾಗೃತಗೊಳಿಸಲಾಗುತ್ತಿದೆ. ಪಾಲಕರ ಸಹಕಾರವಿದ್ದರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಿದ್ದು, ಶಿಕ್ಷಣದಿಂದ ಸಾಧನೆ ಸಾಧ್ಯ. ಶೈಕ್ಷಣಿಕ ಕ್ಷೇತ್ರ ಬಲಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಶಾಲಾ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿದ ಶ್ರೀ ಚನ್ನಬಸವಸ್ವಾಮಿ ಟ್ರಸ್ಟ್ ಕಮಿಟಿ ಸಂಚಾಲಕ ನಾಗರಾಜ್ ಬರಗೂರ್ ಮಾತನಾಡಿ, ಶಾಲಾಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದ್ದು, ಮಕ್ಕಳ ಉತ್ತಮ ಲಿತಾಂಶದತ್ತ ಶಿಕ್ಷಕರು ಗಮನಹರಿಸುವಮತೆ ಸಲಹೆ ನೀಡಿದರು.
ಕಲಿಕಾ ಹಬ್ಬದ ಕುರಿತು ಸಂಪನ್ಮೂಲ ವ್ಯಕ್ತಿ ಕೆ.ಎಂ.ಮಹೇಶ ಮಾಹಿತಿ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಕಮಿಟಿ ಸದಸ್ಯ ಚಂದ್ರೇಗೌಡ, ಸಂಪನ್ಮೂಲ ವ್ಯಕ್ತಿ ಸುಮಂಗಳಾ, ಮುಖಂಡರಾದ ಶ್ರೀದೇವಿ ಜಂಬಣ್ಣ, ಗಾದಿಲಿಂಗಪ್ಪ, ಎಂ.ಪಿ.ಲಿಂಗನಗೌಡ, ದ್ಯಾಮಣ್ಣ, ದೇವೇಂದ್ರಗೌಡ, ಸಂದೀಪ ಪಾಟೀಲ್, ಬಸವರಾಜ ಇತರರಿದ್ದರು. 1 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕಮಿಟಿಯಿಂದ ನೋಟ್‌ಬುಕ್‌ಗಳನ್ನು ಉಚಿತ ವಿತರಿಸಲಾಯಿತು.