ವಾಜಪೇಯಿ ಕೊಡುಗೆ ಅವಿಸ್ಮರಣೀಯ: ಶಾಸಕ ಬಸವರಾಜ ದಢೇಸುಗೂರು ಹೇಳಿಕೆ

25122022 kanakagiri Vajpayee Birthday
Published on

ಕಾರಟಗಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 99ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಜಪೇಯಿ ಅಪರೂಪದ ರಾಜಕೀಯ ಮುತ್ಸದ್ಧಿ, ಶ್ರೇಷ್ಠ ಸಂಸದೀಯ ಪಟು, ಪ್ರಚಂಡ ವಾಗ್ಮಿ, ಕವಿ ಹಾಗೂ ನೇತಾರ. ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಜನನಾಯಕ. ಅವರ ನಾಯಕತ್ವ, ರಾಷ್ಟ್ರೀಯತೆ ಕುರಿತು ಅದ್ಭುತ ಭಾವನೆ ಮತ್ತು ದೃಷ್ಟಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಭಾರತಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಅಂತಹ ಮಹಾನ್ ನಾಯಕರ ಆದರ್ಶ ನಮಗೆಲ್ಲ ಮಾದರಿ ಎಂದು ತಿಳಿಸಿದರು. ಪ್ರಮುಖರಾದ ಹೊನ್ನೂರಪ್ಪ ಮಡಿವಾಳರ, ಶಾಂತಾ ಪವಾರ್, ಚನ್ನಪ್ಪ, ಪರಶುರಾಮ, ಹುಲಿಗೆಪ್ಪ, ಯಮನೂರಪ್ಪ, ಮಂಜುನಾಥ ನಾಯಕ, ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net