ಮಣ್ಣಿನ ರಕ್ಷಣೆಗಾಗಿ ಭತ್ತದ ಹುಲ್ಲು ಸುಡದಿರಿ

Paddy Harvesting
ಕಾರಟಗಿ ತಾಲೂಕಿನ ಸಿದ್ದಾಪುರ ಹೊರವಲಯದಲ್ಲಿ ಭತ್ತ ಕಟಾವು ನಂತರ ಉಳಿದ ಹುಲ್ಲನ್ನು ಸುಡುತ್ತಿರುವುದು.
Published on

ಕಾರಟಗಿ: ಮಣ್ಣಿನ ಫಲವತ್ತತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಭೂಮಿ ರಕ್ಷಣೆಗಾಗಿ ಭತ್ತದ ಹುಲ್ಲು ಸುಡದಂತೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಾರುತಿ ಮನವಿ ಮಾಡಿದ್ದಾರೆ.

ಹೊಸ ಬೆಳೆಗೆ ಭೂಮಿ ಹದಗೊಳಿಸುವ ಉದ್ದೇಶದಿಂದ ರೈತರು ಭತ್ತ ಕಟಾವು ಬಳಿಕ ಹುಲ್ಲಿನ ತ್ಯಾಜ್ಯವನ್ನು ಬೆಂಕಿ ಹಚ್ಚಿ ಸುಡುತ್ತಿದ್ದಾರೆ. ಒಂದು ಟನ್ ಬೆಳೆ ಶೇಷ ಸುಡುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳಾದ 5.5 ಕಿ.ಗ್ರಾಂ ಸಾರಜನಕ, 2.3 ಕಿ.ಗ್ರಾಂ ರಂಜಕ, 25 ಕಿ.ಗ್ರಾಂ ಪೊಟ್ಯಾಷಿಯಂ ಮತ್ತು ಕಿ.ಗ್ರಾಂ ಸಲ್ಫರ್ ನಷ್ಟವಾಗುತ್ತದೆ.

ಇದಲ್ಲದೆ ಬೆಂಕಿಯ ಶಾಖದಿಂದ ತಾಪಮಾನ 33.8 ಸೆ.ನಿಂದ ನಿಂದ 42.2ಲಿ ಸೆ.ಗೆ ಏರುತ್ತದೆ. ಇದರಿಂದ ಫಲವತ್ತಾದ ಮಣ್ಣಿಗೆ ನಿರ್ಣಾಯಕವಾದ ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಬರಗಾಲದಲ್ಲಿ ಮೇವಿನ ಕೊರತೆ ಉಂಟಾಗಲಿದೆ. ಹೀಗಾಗಿ ಹುಲ್ಲು ಸುಡುವ ಬದಲು ಜಮೀನಿನಲ್ಲಿಯೇ ಬಿಟ್ಟು ನೀರು ಹರಿಸುವುದರಿಂದ ಸಾವಯವ ಪ್ರಮಾಣ ಹೆಚ್ಚಾಗುತ್ತದೆ.

ಎರೆಹುಳುವಿನ ಸಂತಾನೋತ್ಪತ್ತಿ ವೃದ್ಧಿಗೆ ಸಹಕಾರಿಯಾಗಲಿದೆ. ಭತ್ತ ಅಲ್ಲದೆ ಜೋಳ, ಮೆಕ್ಕೆಜೋಳ, ಸಜ್ಜೆ, ಶೇಂಗಾ, ತೊಗರಿ, ಸೂರ್ಯಕಾಂತಿ ಬೆಳೆಗಳ ತ್ಯಾಜ್ಯ ಸಹ ಸುಡಬಾರದೆಂದು ರೈತರಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net