ಕಾರಟಗಿ ತಾಲೂಕಿನಲ್ಲಿ ಮುಂದುವರಿದ ಕರೊನಾ ಹಾವಳಿ, ವಿವಿಧೆಡೆ 5 ಪಾಸಿಟಿವ್ ಪ್ರಕರಣ ದೃಢ

06072020 Karatagi Corona Case
Published on

ಕಾರಟಗಿ: ಮಹಾಮಾರಿ ಕರೊನಾ ಹಾವಳಿ ತಾಲೂಕಿನಲ್ಲಿ ಮುಂದುವರಿದಿದ್ದು, ವಿವಿಧ ಗ್ರಾಮಗಳಲ್ಲಿ ಒಟ್ಟು 5 ಪ್ರಕರಣಗಳು ಸೋಮವಾರ ದೃಢಪಟ್ಟಿವೆ. ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ 61 ವರ್ಷದ ಪುರುಷ ಹಾಗೂ 56 ಮತ್ತು 48 ವರ್ಷದ ದಂಪತಿಗೆ ಕರೊನಾ ಸೋಂಕು ದೃಢಪಟ್ಟಿದೆ.

ಸೋಂಕಿತರೆಲ್ಲರೂ ಬೆಂಗಳೂರಿಗೆ ತೆರಳಿ ಕಳೆದ ಕೆಲ ದಿನಗಳ ಹಿಂದಷ್ಟೇ ಗ್ರಾಮಕ್ಕೆ ಆಗಮಿಸಿದ್ದರು. ಸಿಂಧನೂರು ತಾಲೂಕಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರಟಗಿ ಪಟ್ಟಣದ 6ನೇ ವಾರ್ಡ್ ನ 32 ವರ್ಷದ ಪುರುಷ ಹಾಗೂ ತೊಂಡಿಹಾಳ ಕ್ಯಾಂಪ್‌ನ 45 ವರ್ಷದ ಪುರುಷಗೆ ಕರೊನಾ ಪಾಸಿಟಿವ್ ಕಂಡುಬಂದಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಾಗಿ ವಿವಿಧ ಗ್ರಾಮಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಸೋಂಕಿತರ ಮನೆ ವ್ಯಾಪ್ತಿಯ 50 ಮೀ. ಪ್ರದೇಶವನ್ನು ಕಟೋನ್‌ಮೆಂಟ್ ಜೋನ್ ಹಾಗೂ 200 ಮೀ. ವ್ಯಾಪ್ತಿ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net