ರೈತರಿಗೆ ಮತ್ತೆ ವರುಣಾಘಾತ, ಭತ್ತ ಒಣಗಿಸಲು ಹರಸಾಹಸ

RAIN
ಸಿದ್ದಾಪುರದಲ್ಲಿ ಮಳೆಯಿಂದ ರಕ್ಷಿಸಲು ಭತ್ತದ ರಾಶಿಗೆ ತಾಡಪಾಲು ಮುಚ್ಚುತ್ತಿರುವುದು.
Published on

ಕಾರಟಗಿ: ತಾಲೂಕಿನಾದ್ಯಂತ ಕೆಲ ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಸೋಮವಾರ ಕೆಲ ಹೊತ್ತು ಸುರಿದ ಮಳೆ ಅನ್ನದಾತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಈಗಾಗಲೇ ಗಾಳಿ-ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಭತ್ತದ ಬೆಳೆ ನೆಲಕಚ್ಚಿದೆ. ಈ ಮಧ್ಯೆಯೇ ಬೆಲೆ ಕುಸಿತ ಆಗಿರುವುದು ರೈತರನ್ನು ದಿಗಿಲುಗೊಳಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮೋಡ ಕವಿದ ವಾತಾವರಣ, ಆಗಾಗ ಜಡಿ ಮಳೆ ಸುರಿಯುತ್ತಿರುವುದರಿಂದ ಭತ್ತ ಒಣಗಿಸುವುದು ತಲೆನೋವಾಗಿ ಪರಿಣಮಿಸಿದೆ.

ಕಾರಟಗಿ ಹಾಗೂ ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ ಮಾತ್ರ ಭತ್ತ ಕಟಾವು ಮಾಡಲಾಗಿದ್ದು, ಇನ್ನೂ ಅಪಾರ ಪ್ರಮಾಣದ ಕೋಯ್ಲು ಬಾಕಿಯಿದೆ. ಬಿಸಿಲು ಬೀಳದ ಕಾರಣ ತೇವವಾದ ಭತ್ತ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ನಾಟಿಯಿಂದ ಮಾರಾಟ ಮಾಡುವವರೆಗೂ ರೈತರಿಗೆ ಒಂದಾದ ಮೇಲೊಂದು ಸಮಸ್ಯೆಗಳು ಕಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net