ಕುಮಾರರಾಮನ ರಥಯಾತ್ರೆಗೆ ಚಾಲನೆ

KUMARARAMA
ಕಾರಟಗಿಯ ವಿಶೇಷ ಎಪಿಎಂಸಿ ಆವರಣದಲ್ಲಿ ಗಂಡುಗಲಿ ಕುಮಾರರಾಮನ ಕನ್ನಡ ರಥಯಾತ್ರೆಗೆ ವಿಶೇಷ ಎಪಿಎಂಸಿ ಮಾಜಿಅಧ್ಯಕ್ಷ ಬಿ.ಶಿವರೆಡ್ಡಿ ನಾಯಕ ಗುರುವಾರ ಚಾಲನೆ ನೀಡಿದರು. ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಗದ್ದೆಪ್ಪ ನಾಯಕ, ಕಸಾಪ ತಾಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಮಾಜಿ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಪ್ರಮುಖರಾದ ನಾಗರಾಜ ಬಿಲ್ಗಾರ್, ಬೂದಿ ಗಿರಿಯಪ್ಪ, ರಮೇಶ ನಾಡಿಗೇರ್, ಸೋಮನಾಥ ದೊಡ್ಮನಿ, ಹನುಮಂತಪ್ಪ ತೊಂಡಿಹಾಳ ಇತರರಿದ್ದರು.
Published on

ಕಾರಟಗಿ: ಪಟ್ಡಣದ ವಿಶೇಷ ಎಪಿಎಂಸಿ ಆವರಣದಲ್ಲಿ ಗಂಡುಗಲಿ ಕುಮಾರರಾಮನ ಕನ್ನಡ ರಥಯಾತ್ರೆಗೆ ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಶಿವರೆಡ್ಡಿ ನಾಯಕ ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಪಟ್ಟಣದ ಗಂಡುಗಲಿ ಕುಮಾರರಾಮನ ಅಭಿಮಾನಿ ಬಳಗ ಕಳೆದ ವರ್ಷದಿಂದ ಕುಮ್ಮಟದುರ್ಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಅಲ್ಲದೆ ಇತಿಹಾಸ ತಜ್ಞರು, ಸಂಶೋಧಕರ ಮೂಲಕ ಕುಮಾರರಾಮನ ಜೀವನ, ಕಾರ್ಯವೈಖರಿ, ಶ್ರದ್ಧೆ, ವೃತ್ತಿಪರತೆ ಸೇರಿದಂತೆ ಆತನ ಕೊಡುಗೆಗಳ ಕುರಿತು ಸಮಾಜಕ್ಕೆ ತಿಳಿಪಡಿಸಲಾಗುತ್ತಿದೆ.

ಸರ್ಕಾರ ಹೆಚ್ಚಿನ ಆಸ್ತೆವಹಿಸಿ ಕುಮ್ಮಟದುರ್ಗ ಅಭಿವೃದ್ಧಿಪಡಿಸುವ ಜತೆಗೆ ಸಂಶೋಧನಾ ಕೇಂದ್ರ ಆರಂಭಿಸುವ ಅಗತ್ಯತೆಯಿದೆ. ಅಂದಾಗ ಮಾತ್ರ ಕುಮಾರರಾಮನನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಾಡಿಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಗಂಡುಗಲಿ ಕುಮಾರರಾಮನ ಭಾವಚಿತ್ರವುಳ್ಳ ಕನ್ನಡ ರಥಯಾತ್ರೆ 100ಕ್ಕೂ ಅಧಿಕ ಬೈಕ್ ರ‌್ಯಾಲಿ ಮೂಲಕ ಕುಮ್ಮಟದುರ್ಗಕ್ಕೆ ತೆರಳಿತು. ಪಟ್ಟಣದ ವಿಶೇಷ ಎಪಿಎಂಸಿಯಿಂದ ಆರ್.ಜಿ ಮುಖ್ಯರಸ್ತೆ, ಹಳೇಬಸ್ ನಿಲ್ದಾಣ, ಸಾಲೋಣಿ ಕ್ರಾಸ್, ಕನಕದಾಸ ವೃತ್ತ, ಪುರಸಭೆ ಕಚೇರಿ ಮುಂಭಾಗದ ಮೂಲಕ ರಥಯಾತ್ರೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net