ಮತ ಪಡೆಯಲು ಗ್ರಾಪಂ ಉಪಾಧ್ಯಕ್ಷೆ ಅಪಹರಣ?

ಬೆನ್ನೂರು ಗ್ರಾಪಂ ಉಪಾಧ್ಯಕ್ಷೆ ಅಪಹರಣ ಕುರಿತು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರತಿ.
ಬೆನ್ನೂರು ಗ್ರಾಪಂ ಉಪಾಧ್ಯಕ್ಷೆ ಅಪಹರಣ ಕುರಿತು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರತಿ.
Published on

ಸಿದ್ದಾಪುರ: ಬೆನ್ನೂರು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಅವರನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಅವರ ಮಗ ಫಕೀರ್ ಸಾಬ್ ಜು.13 ರಂದು ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆನ್ನೂರು ಗ್ರಾಪಂನ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.

ಮತ ಪಡೆಯುವ ಉದ್ದೇಶದಿಂದ ನಮ್ಮ ತಾಯಿಯನ್ನು ಫೀರಮ್ಮ ಕಕ್ಕರಗೋಳ ಎಂಬುವರು ಬೇರೆಯವರ ಪ್ರಚೋದನೆಯಿಂದ ಅಪಹರಣ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net