ಗ್ರಾಮ ವಿಕಾಸ ಯೋಜನೆ ಕಾಮಗಾರಿಗಳು ಪರಿಶೀಲನೆ

Untitled design(5)
Published on

ಕಾರಟಗಿ: ತಾಲೂಕಿನ ಬರಗೂರು ಗ್ರಾಪಂ ವ್ಯಾಪ್ತಿಯ ಕೊಟ್ನೆಕಲ್ ಗ್ರಾಮದಲ್ಲಿ 2017-18ನೇ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಕೈಗೊಂಡ ನಾನಾ ಕಾಮಗಾರಿಗಳನ್ನು ಕಲಬುರಗಿ ವಿಭಾಗದ ಪಿಆರ್‌ಇಡಿ ಕಚೇರಿ ಅಧಿಕಾರಿಗಳು ಶುಕ್ರವಾರ ಪರಿಶೀಲನೆ ನಡೆಸಿದರು.

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 2017-18ರಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಕೊಟ್ನೆಕಲ್ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಈ ಯೋಜನೆಯ ಕೆಲ ಕಾಮಗಾರಿಗಳನ್ನು ಅರ್ಧಕ್ಕೆ ಮಾಡಲಾಗಿದೆ. ಕೆಲ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಇನ್ನು ಕೆಲ ಕಾಮಗಾರಿಗಳು ಶಾಸಕರ ಅನುದಾನದಲ್ಲಿ ಮಾಡಲಾಗಿದ್ದರೂ ಸಹ ಸಿಎಂ ಗ್ರಾಮ ವಿಕಾಸ ಯೋಜನೆಯಡಿ ಸದರಿ ಕಾಮಗಾರಿಗಳನ್ನು ಮಾಡಿರುವುದಾಗಿ ಬೋಗಸ್ ಬಿಲ್ ಎತ್ತುವಳಿ ಮಾಡಲಾಗಿದೆ. ಹೀಗಾಗಿ ಅಂದಿನ ಪಿಆರ್ ಇಡಿ ಇಲಾಖೆ ಇಇ ರಂಗಯ್ಯ ಬಡಿಗೇರ್, ಗಂಗಾವತಿ ತಾಲೂಕು ಪಿಆರ್ ಇಡಿ ಎಇಇ ಎಸ್.ಡಿ. ನಾಗೋಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಕಲಬುರಗಿ ವಿಭಾಗದ ಪಿಆರ್ ಇಡಿ ಇಲಾಖೆಯ ಅಧೀಕ್ಷಕ ಇಂಜನಿಯರ್ ಕಚೇರಿ ಅಧಿಕಾರಿಗಳು ಕೊಟ್ನೆಕಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳಾದ ಗುರುರಾಜ ಹಾಗೂ ಶಿವರಾಜ 2017-18ರಲ್ಲಿ ಗ್ರಾಮ ವಿಕಾಸ ಯೋಜನೆಯಡಿ ನಿರ್ಮಾಣ ಮಾಡಲಾದ ಕಾಮಗಾರಿಗಳಾದ ಸಿಸಿ ರಸ್ತೆ, ದೇವಸ್ಥಾನ ಕಟ್ಟಡ ನಿರ್ಮಾಣ ಸೇರಿ ಇತರೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಟೇಪ್ ಹಿಡಿದು ನಾನಾ ಕಾಮಗಾರಿಗಳನ್ನು ಅಳತೆ ಮಾಡಿದರು. ಕಾಮಗಾರಿಯ ವಸ್ತು ಸ್ಥಿತಿಯನ್ನು ಕಲಬುರಗಿ ವಿಭಾಗದ ಅಧೀಕ್ಷಕ ಇಂಜನಿಯರ್ ಗೆ ಸಲ್ಲಿಕೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. ಜೆಇ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net