ಕಾರಟಗಿ ತಾಲೂಕಿನ ಕೊಟ್ನೆಕಲ್ ಗ್ರಾಮದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ತಾತನವರ ಮೂರ್ತಿ ಮೆರವಣಿಗೆಯಲ್ಲಿ ವೀರಗಾಸೆ ಗಮನ ಸೆಳೆಯಿತು.
Published on:
Copied
Follow Us
ಕಾರಟಗಿ: ತಾಲೂಕಿನ ಕೊಟ್ನೆಕಲ್ ಗ್ರಾಮದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ತಾತನವರ 120ನೇ ಪುಣ್ಯಸ್ಮರಣೋತ್ಸವ ಹಾಗೂ 8ನೇ ವರ್ಷದ ಮಹಾರಥೋತ್ಸವ ಶುಕ್ರವಾರ ಜರುಗಿತು.
ಬೆಳಗ್ಗೆ ಕರ್ತೃ ಗದ್ದುಗೆಗೆ ಅಭಿಷೇಕ, ಹೊಮ-ಹವನ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ, ಪೂಜಾ ಕಾರ್ಯಗಳನ್ನು ಎಚ್.ಎಂ.ಗುರುಸಂಗಯ್ಯತಾತ, ಎಚ್.ಎಂ.ಸಂಗಯ್ಯ ತಾತ ಅವರು ನೆರವೇರಿಸಿದರು.
ನಂತರ ಕುಂಭ-ಕಳಸ, ಜನಪದ ಕಲೆ ಹಾಗೂ ವಾದ್ಯಮೇಳದೊಂದಿಗೆ ಗಂಗೆಸ್ಥಳಕ್ಕೆ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯಲ್ಲಿ ಸಂಗಮೇಶ್ವರ ತಾತನವರ ಮೂರ್ತಿ ಇರಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಸಂಜೆ ರಥೋತ್ಸವ ಅದ್ದೂರಿಯಾಗಿ ಜರುಗಿತು. ರೌಡಕುಂದದ ಮರಿಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಂಗಾರಿಕ್ಯಾಂಪಿನ ಡಾ.ಸಿದ್ಧರಾಮೇಶ್ವರ ಸ್ವಾಮೀಜಿ ಇತರರಿದ್ದರು.