ಕರಸೇವಕರನ್ನು ಜೈಲಿಗೆ ಹಾಕುತ್ತಿರುವ ಸರ್ಕಾರ: ಕೋಟ ಖಂಡನೆ

kota 1
Published on

ಉಡುಪಿ: ರಾಜ್ಯದಲ್ಲಿ ಕಾನೂನು ಸುವಸ್ಥೆ ಪಾಲಿಸುವ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ 31 ವರ್ಷದ ಹಿಂದಿನ ಪ್ರಕರಣಗಳನ್ನು ರೀ ಓಪನ್​ ಮಾಡಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕರಸೇವಕರನ್ನು ಜೈಲಿಗೆ ಕಳುಹಿಸುತ್ತಿರುವುದು ಖಂಡನೀಯ ಎಂದು ವಿಧಾನ ಪರಿಷತ್​ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಬಗ್ಗೆ ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಸಾರ್ವಜನಿಕ ದೇಣಿಗೆಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ರಾಮಮಂದಿರ ನಿಮಾರ್ಣವಾಗಿದೆ. ಈ ಸಂದರ್ಭದಲ್ಲಿ ಹಳೆಯ ಕೇಸ್​ ಹುಡುಕಿ ಕಾರ್ಯಕರ್ತರನ್ನು ಜೈಲಿಗೆ ಹಾಕುವ ಕೆಲಸ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.

ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆಯಲ್ಲಿ ನಿಮಾರ್ಣವಾಗುತ್ತಿರುವ ರಾಮಮಂದಿರ ಇಡೀ ದೇಶಕ್ಕೆ ಹೆಮ್ಮ. ಸಿದ್ದರಾಮಯ್ಯ ರಾಮನಾಗಲಿ, ಆಂಜನೇಯ ಹನುಮಂತ ಆದರೆ ನಮ್ಮ ಅಕ್ಷೇಪ ಇಲ್ಲ. ಅಯೋಧ್ಯೆಯಲ್ಲಿರುವುದು ಶ್ರೀರಾಮ ಮಂದಿರ. ರಾಮಮಂದಿರವನ್ನು ಗೌರವಿಸಬೇಕಾದದ್ದು ಪಕ್ಷ ಮತ್ತು ಸರಕಾರದ ಜವಾಬ್ದಾರಿಯಾಗಿದೆ ಎಂದರು.

40 ಸಾವಿರ ಕೋಟಿ ಹಗರಣ ವಿಚಾರ
ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಸಾವಿರ ಕೋಟಿ ಹಗರಣ ನಡೆದಿದೆ ಎಂಬ ಬಿಜೆಪಿ ಶಾಸಕ ಯತ್ನಾಳ್​ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರು, ಯತ್ನಾಳ್​ ಎಲ್ಲಾ ಹೇಳಿಕೆಗಳು ಚರ್ಚೆಯಲ್ಲಿದೆ. ಕೇಂದ್ರ ನಾಯಕರು ಅವರನ್ನು ಕರೆದು ಬುದ್ಧಿ, ತಿಳುವಳಿಕೆ ಹೇಳಲಿದ್ದಾರೆೆ. 40,000 ಕೋಟಿ ಎಂದರೆ ಉರುಳು ತಿರುಳು ಉಂಟಾ ಎಂದು ಆರೋಪ ಮಾಡಿದವರಿಗೆ ಗೊತ್ತು. ಕೇಂದ್ರದ ನಾಯಕರು ಎಲ್ಲವನ್ನು ಗಮನಿಸಿದ್ದಾರೆ ಎಂದರು.

ಬಿಜೆಪಿಯ ಲೋಕಸಭಾ ಸದಸ್ಯನ ಸಹೋದರನೆಂಬ ಕಾರಣಕ್ಕೆ ಎ್​ಐಆರ್​ನಲ್ಲಿ ಹೆಸರಿಲ್ಲದಿದ್ದರೂ ಬಂಧಿಸಲಾಗಿದೆ. ನನ್ನ ಕುಟುಂಬವನ್ನು ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ. ಇಂತಹ ವಿಪರೀತಕ್ಕೆ ಸರ್ಕಾರ ಹೋಗಬಾರದಿತ್ತು. ಮುಖ್ಯಮಂತ್ರಿ ಮಗನನ್ನು ಗೆಲ್ಲಿಸುವ ಕಾರಣಕ್ಕೆ ಇಷ್ಟೆಲ್ಲಾ ಮಾಡುತ್ತಿರುವುದು ಸರಿಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net