

ಕೋಟ: ಶಾಸ್ತ್ರೀಯವಾಗಿ ಸಂಗೀತ ಕಲಿತವರಿಗೆ ಕರೋಕೆ ಸಂಗೀತ ಅಭ್ಯಾಸ ಹತ್ತಿರವಾಗುತ್ತದೆ. ಈಜು ಕಲಿತು ಸಮುದ್ರದ ಆಳವನ್ನು ಲೆಕ್ಕ ಹಾಕಿದಂತೆ. ಕರೋಕೆ ಸಂಗೀತವು ಪ್ರಸಿದ್ಧಿ ಹೊಂದುವುದಕ್ಕೆ ಸುಲಭ ಸಾಧ್ಯವಾಗುತ್ತದೆ. ಶೃತಿಜ್ಞಾನ ಯಥೇಚ್ಛವಾಗಿ ಇದ್ದರೆ ಸಂಗೀತವು ಕಾರ್ಯಕ್ರಮದಲ್ಲಿ ಗೆಲ್ಲುತ್ತದೆ ಎಂದು ಕರೋಕೆ ಸಂಗೀತದ ಪ್ರಸಿದ್ಧ ಗಾಯಕ ರಾವೇಂದ್ರ ಕೋಟೇಶ್ವರ ಹೇಳಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಆಯೋಜಿಸುತ್ತಿರುವ ಸರಣಿ ಕರೋಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಂಗಭೂಮಿ ಕಲಾವಿದೆ ಸುಧಾ ಮಣೂರು, ಪಾರ್ವತಿ ಮಯ್ಯ, ಭಾಗ್ಯಲಕ್ಷ್ಮೀ ವೈದ್ಯ, ವಂದನಾ ರಾವೇಂದ್ರ, ಪ್ರಶಾಂತ್ ಪಡುಕೆರೆ ಉಪಸ್ಥಿತರಿದ್ದರು.