ಕಾರಂತರ ಸಾಹಿತ್ಯಿಕ ಬದುಕು ಸರ್ವರಿಗೂ ಮಾದರಿ

karanta puraskara
ಡಾ.ಕೋಟ ಶಿವರಾಮ ಕಾರಂತ ಜನ್ಮದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ನಾ.ಮೊಗಸಾಲೆ ಅವರಿಗೆ ಪುರಸ್ಕಾರ ಪ್ರದಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಕೋಟ

ಕಾರಂತರ ವ್ಯಕ್ತಿತ್ವ ಬಹು ವಿಶಿಷ್ಟವಾದದ್ದು. ಅವರ ಸಾಹಿತ್ಯಿಕ ಬದುಕು ಸರ್ವರಿಗೂ ಮಾದರಿ ಎಂದು ಕಲ್ಕೂರ ಪ್ರತಿಷ್ಠಾನ ಪ್ರವರ್ತಕ ಪ್ರದೀಪ್‌ಕುಮಾರ್ ಕಲ್ಕೂರ ಹೇಳಿದರು.

ಸಾಲಿಗ್ರಾಮದ ಗಿರಿಜಾ ಸಭಾಂಗಣದಲ್ಲಿ ಕಾರ್ಕಡ ಗೆಳೆಯರ ಬಳಗ ವತಿಯಿಂದ ಡಾ.ಕೋಟ ಶಿವರಾಮ ಕಾರಂತ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ಕಾರಂತ ಸಂಸ್ಮರಣೆ, ಗೆಳೆಯರ ಬಳಗ ಕಾರಂತ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಡವೂರು ಉಡುಪಿರತ್ನ ಪ್ರತಿಷ್ಠಾನ ಸಂಚಾಲಕಿ ಪೂರ್ಣಿಮಾ ಜನಾರ್ದನ ಕಾರಂತರ ಸಂಸ್ಮರಣೆಗೈದರು. ಸಾಹಿತಿ ಡಾನಾ.ಮೊಗಸಾಲೆ ಅವರಿಗೆ ಗೆಳೆಯರ ಬಳಗ ಕಾರಂತ ಪುರಸ್ಕಾರ ಪ್ರದಾನಿಸಲಾಯಿತು.

ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ವಾದಿರಾಜ್ ಕೆ. ಉದ್ಘಾಟಿಸಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿದೆರ್ವಶಕ ಸಿ.ಸುರೇಶ್ ತುಂಗ ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನನೂರು ಅಧ್ಯಕ್ಷತೆ ವಹಿಸಿದ್ದರು. ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಎಚ್.ಜನಾರ್ದನ ಹಂದೆ ಉಪಸ್ಥಿತರಿದ್ದರು. ಕೆ.ತಾರಾನಾಥ ಹೊಳ್ಳ ಸ್ವಾಗತಿಸಿದರು. ಮಂಜುನಾಥ ಉಪಾಧ್ಯಾ ಸನ್ಮಾನಪತ್ರ ವಾಚಿಸಿದರು. ಕೆ.ಶೀನ ವಂದಿಸಿದರು. ಶಶಿಧರ ಮಯ್ಯ ನಿರೂಪಿಸಿದರು. ಮೆಕ್ಕೆಕಟ್ಟು ಮೇಳದ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net